×
Ad

ಅನುದಾನರಹಿತ ಪ್ರೌಢಶಾಲಾ ಶಿಕ್ಷಕರಿಗೆ 2 ದಿನಗಳ ತರಬೇತಿ

Update: 2022-06-11 21:49 IST

ಉಡುಪಿ : ಬೆಂಗಳೂರಿನ ಕೆನರಾ ಬ್ಯಾಂಕ್ ಜ್ಯುಬಿಲಿ ಎಜ್ಯುಕೇಶ್ ಫಂಡ್, ಡಯಟ್ ಸಂಸ್ಥೆ ಉಡುಪಿ,  ರಮೇಶ್ ಯು ಪೈ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಅನುದಾನ ರಹಿತ  ಪ್ರೌಢ ಶಾಲಾ ಶಿಕ್ಷಕರಿಗೆ ೨ ದಿನಗಳ ಕಲಿಕಾ ಪುನ:ಶ್ವೇತನ  ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇವುಗಳ ಬಗ್ಗೆ ಮಾಹಿತಿ ಮತ್ತು ತರಬೇತಿಯನ್ನು ಇತ್ತೀಚೆಗೆ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಆಯೋಜಿಸಲಾಗಿತ್ತು.

ಮಣಿಪಾಲದ ರಮೇಶ್ ಯು ಪೈ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ದಯಾನಂದ ಶೆಟ್ಟಿ ದೀಪ ಬೆಳಗಿಸಿ ತರಬೇತಿಯನ್ನು ಉದ್ಘಾಟಿಸಿದರು.  ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮತ್ತು ಡಯಟ್ ಸಂಸ್ಥೆಯ ಉಪನ್ಯಾಸಕರಾದ ಯೋಗ ನರಸಿಂಹ ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸನ್ನಕುಮಾರ್ ಶೆಟ್ಟಿ, ಗಣೇಶ ಶೆಟ್ಟಿಗಾರ್, ಅಝಾದ್ ಮಹಮದ್, ಅಶೋಕ್ ಕಾಮತ್, ಸಂತೋಷ್ ಎನ್ ಆರ್ ಭಾಗವಹಿಸಿದ್ದರು.  ಉಡುಪಿ ಜಿಲ್ಲೆಯ ೫೫ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.

ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ. ಲಕ್ಷ್ಮೀ ಬಾಯಿ ಅತಿಥಿಗಳನ್ನು ಸ್ವಾಗತಿಸಿದರು. ಅಲೆವೂರು ಶಾಂತಿ ನಿಕೇತನ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ವಂದಿಸಿದರು.

ಸಮಾರೋಪ: ಎರಡನೇ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಅನುದಾನ ರಹಿತ ಪ್ರೌಢ ಶಾಲಾ ಶಿಕ್ಷಕರಿಗೆ ಇಂತಹಾ ತರಬೇತಿಗಳನ್ನು ಆಯೋಜಿಸುತ್ತಿರುವ ಭಾರತೀಯ ವಿಕಾಸ  ಟ್ರಸ್ಟ್‌ನ ಪ್ರಯತ್ನ ಶ್ಳಾಘನೀಯ. ಪರಿಣಾಮಕಾರಿ ಬೋಧನೆಗೆ ಇಂದು ತುಂಬಾ ಸಹಕಾರಿಯಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News