20 ವರ್ಷದ ಸಹಕಾರ ಯೋಜನೆಗೆ ಇರಾನ್-ವೆನೆಝುವೆಲಾ ಸಹಿ

Update: 2022-06-11 17:33 GMT
Reuters

ಟೆಹ್ರಾನ್, ಜೂ.11: ಉಭಯ ದೇಶಗಳ ನಡುವಿನ ಮುಂದಿನ 20 ವರ್ಷದ ಸಹಕಾರ ಯೋಜನೆಯ ಮಾರ್ಗನಕ್ಷೆಗೆ ಇರಾನ್ ಮತ್ತು ವೆನೆಝುವೆಲಾ ದೇಶಗಳು ಸಹಿ ಹಾಕಿವೆ ಎಂದು ವರದಿಯಾಗಿದೆ.

 ಇರಾನ್‌ಗೆ ಉನ್ನತ ಮಟ್ಟದ ನಿಯೋಗದ ಜತೆ ಭೇಟಿ ನೀಡಿರುವ ವೆನೆಝುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ ಶನಿವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯನ್ನು ಭೇಟಿಯಾದ ಸಂದರ್ಭ ದ್ವಿಪಕ್ಷೀಯ ಬಾಂಧವ್ಯಕ್ಕೆ ಉತ್ತೇಜನ ನೀಡುವ ಮಹತ್ವದ ಯೋಜನೆಗೆ ಉಭಯ ದೇಶಗಳ ವಿದೇಶಾಂಗ ಸಚಿವರು ಸಹಿ ಹಾಕಿದ್ದಾರೆ ಎಂದು ಇರಾನ್‌ನ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸಭೆಯ ಬಳಿಕ ಜಂಟಿಸುದ್ದಿಗೋಷ್ಟಿ ನಡೆಸಿದ ಉಭಯ ಮುಖಂಡರು, ದ್ವಿಪಕ್ಷೀಯ ಸಂಬಂಧ ಕಾರ್ಯತಂತ್ರದ ಮಟ್ಟಕ್ಕೆ ಏರಿರುವುದನ್ನು ಶ್ಲಾಘಿಸಿದರು ಮತ್ತು ಉಭಯ ದೇಶಗಳು ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಜತೆಗೆ ವ್ಯಾಪಾರದಲ್ಲೂ ಸಹಕಾರ ಸಂಬಂಧ ಹೆಚ್ಚಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

 ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ವಿದೇಶಾಂಗ ನೀತಿಯು ಎಂದಿಗೂ ಸ್ವತಂತ್ರ ದೇಶಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದಕ್ಕೆ ಪೂರಕವಾಗಿದೆ. ಶತ್ರುಗಳು ಮತ್ತು ಸಾಮ್ರಾಜ್ಯಶಾಹಿಯಿಂದ ಬೆದರಿಕೆ ಮತ್ತು ನಿರ್ಬಂಧಗಳ ವಿರುದ್ಧ ವೆನೆಝುವೆಲಾ ನಂಬಲಾಗದ ಪ್ರತಿರೋಧವನ್ನು ತೋರಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News