×
Ad

ಪ್ರವಾದಿ ನಿಂದನೆ, ಇಸ್ಲಾಂ ವಿರುದ್ಧ ಅವಹೇಳನಕಾರಿ ಹೇಳಿಕೆ: ದ.ಕ. ಜಿಲ್ಲಾ ಫೈಝೀಸ್ ಖಂಡನೆ

Update: 2022-06-12 10:02 IST

ಬಿ.ಸಿ ರೋಡ್: ಪ್ರವಾದಿ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಬಿಜೆಪಿಯ ನೂಫುರ್ ಶರ್ಮಾ ಮತ್ತು ನವೀನ್ ಕುಮಾರ್ ಹಾಗು ವಿಟ್ಲದಲ್ಲಿ ರಾಧಾಕೃಷ್ಣ ಅಡ್ಯಂತಾಯ ಎಂಬ ವ್ಯಕ್ತಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾಡಿದ ಭಾಷಣವನ್ನು ದ.ಕ ಜಿಲ್ಲಾ ಫೈಝೀಸ್‌ ಮಹಾ ಸಭೆ ಖಂಡಿಸಿದೆ.

ಮುಸಲ್ಮಾನರು ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರವಾದಿಯವರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿದ ಮತ್ತು ಧರ್ಮಗಳ ನಡುವೆ ವಿಷಬೀಜ ಬಿತ್ತಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗುವ ಇಂತಹ ಸನ್ನಿವೇಶ ಮುಂದಕ್ಕೆ ಉಂಟಾಗದಿರಲು ಇಂತಹ ಸಮಾಜಘಾತಕಿಗಳ ವಿರುದ್ದ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಬಂಧಿಸಬೇಕಾಗಿ ಮಹಾಸಭೆ ಆಗ್ರಹಿಸಿತು.

ಮಿತ್ತಬೈಲ್ ದಾರುಲ್ ಮಆರಿಫ್  ಮದ್ರಸದಲ್ಲಿ ನಡೆದ ಮಹಾಸಭೆಯಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಮಾಹಿನ್ ಮುಸ್ಲಿಯಾರ್ ತೊಟ್ಟಿ, ಉಸ್ಮಾನ್ ಫೈಝಿ ತೋಡಾರ್, ಶರೀಫ್ ಫೈಝಿ ಕಡಬ, ಇಸ್ಮಾಯಿಲ್ ಫೈಝಿ ಕರಾಯ, ಮೂಸಲ್ ಫೈಝಿ ಪಾಟ್ರಕೋಡಿ, ಅಬ್ದುರ್ರಹ್ಮಾನ್ ಫೈಝಿ ಬಜಾಲ್, ಅಬುಸ್ವಾಲಿಹ್ ಫೈಝಿ ಅಕ್ಕರಂಗಡಿ, ಜಾಬಿರ್ ಫೈಝಿ ಬನಾರಿ ಸಹಿತ ಜಿಲ್ಲೆಯ ನೂರಾರು ಫೈಝಿ ಉಲಮಾಗಳು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News