×
Ad

ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಸಜೀಪ ರೇಂಜ್ ವಾರ್ಷಿಕ ಮಹಾಸಭೆ

Update: 2022-06-12 11:33 IST

ಸುನ್ನಿ ಜಂಇಯ್ಶತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾಸಭೆ ಕೊಳಕೆ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು. ಮುಷ್ತಾಕ್ ರಹ್ಮಾನ್ ತಂಙಳ್ ಚಟ್ಟೆಕ್ಕಲ್ ರವರ ದುಆ ಆಶೀರ್ವಚನ ದೊಂದಿಗೆ ಪ್ರಾರಂಭಿಸಿದ ಸಭೆಯಲ್ಲಿ  ರೇಂಜ್ ಕಾರ್ಯದರ್ಶಿ ರಝಾಕ್ ಸಖಾಫಿ ಸ್ವಾಗತಿಸಿದರು.

ಸಭೆಯ ನ್ನು ರೇಂಜ್ ಮುಫತ್ತಿಷ್ ಅಬೂಬಕ್ಕರ್ ಸಿದ್ದೀಕ್ ಮದನಿ ಉದ್ಘಾಟಿಸಿದರು. ರಿಟರ್ನಿಂಗ್ ಆಫೀಸರ್ ಆಗಿ ಸಭೆಗೆ ಹಾಜರಾದ ಯಾಹ್ಕೂಬ್ ಲತೀಫಿ ತರಗತಿ ಮಂಡಿಸಿದರು. ನಂತರ ಯಾಹ್ಕೂಬ್ ಲತೀಫಿ ಅವರ ನೇತತ್ವ ದಲ್ಲಿ ಸುನ್ನಿ ಜಂಯೀಯತುಲ್ ಮುಅಲ್ಲಿಮೀನ್ -ಸಜೀಪ ರೇಂಜ್  ಇದರ ಮೂರು ವರ್ಷ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಮುಷ್ತಾಕ್ ರಹ್ಮಾನ್ ತಂಙಳ್ ಚಟ್ಟೆಕ್ಕಲ್  ಪುನರಾಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಯಾಗಿ ರಝಾಕ್ ರಝಾಕ್ ಸಖಾಫಿ ಕೊಳಕೆ, ಕೋಶಾಧಿಕಾರಿ ಯಾಗಿ ಮಜೀದ್  ಸಅದಿ ಕೌಡೇಲ್, ಪರೀಕ್ಷೆ ಐಟಿ ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಸೈಫುಲ್ಲಾ ಸಅದಿ ಸುಬ್ಬಗುಳಿ, ಇದರ ಕಾರ್ಯದರ್ಶಿಯಾಗಿ ರಫೀಕ್ ಮದನಿ ಕೊಳಕೆ, ಮ್ಯಾಗಝಿನ್ ವಿಭಾಗದ ಅಧ್ಯಕ್ಷರಾಗಿ ಮುಹ್ಯದ್ದೀನ್ ರಝಾ ಅಂಜದಿ ಜಾರದಗುಡ್ಡೆ, ಇದರ ಕಾರ್ಯದರ್ಶಿ ಯಾಗಿ ಉಸ್ಮಾನ್ ಸಖಾಫಿ ಕಂಚಿಲ, ಟ್ರೈನಿಂಗ್ ಮತ್ತು ಮಿಷನರಿ ವಿಭಾಗದ ಅಧ್ಯಕ್ಷರಾಗಿ ಆಶ್ರಫ್ ಸಖಾಫಿ  ಗೊಳಿಪಡ್ಪು, ಕಾರ್ಯದರ್ಶಿ ಯಾಗಿ ಇಬ್ರಾಹಿಂ ಸಅದಿ ಬೊಳ್ಳಾಯಿ ಇವರನ್ನು ಆಯ್ಕೆ ಮಾಡಲಾಯಿತು.

ಹಲವು ಮಹತ್ವ ಪೂರ್ಣವಾದ ತೀರ್ಮಾನ ಗಳೊಂದಿಗೆ ಸಭೆ ಯು ಸಮಾಪ್ತಿ ಗೊಂಡಿತು. ನೂತನ ಕಾರ್ಯದರ್ಶಿ ರಝಾಕ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News