ಉಡುಪಿ ಜಿಲ್ಲಾ ಆರ್‌ಟಿಐ ಕಾರ್ಯಕರ್ತರ ಸಮಾವೇಶ
ಬೈಂದೂರು, ಜೂ.೧೨: ಉಡುಪಿ ಜಿಲ್ಲಾ ಆರ್‌ಟಿಐ ಕಾರ್ಯಕರ್ತರ ಸಮಾವೇಶವು ಬೈಂದೂರಿನ ಬಂಕೇಶ್ವರ ರಸ್ತೆಯ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಸಮಾವೇಶವನ್ನು ಉದ್ಘಾಟಿಸಿದ ಸಂಘಟನೆಯ ಜಿಲ್ಲಾ ಸಂಚಾಲಕ ಬ್ರಹ್ಮಾವರ ಸತೀಶ ಪೂಜಾರಿ ಮಾತನಾಡಿ, ವಿವಿಧ ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಚಾರ, ಅವ್ಯವಹಾರ, ಸ್ವಜನ ಪಕ್ಷಪಾತ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಯಲು ಆಡಳಿತ ವರ್ಗ ಯಾವುದೇ ಕಠಿಣ ಕ್ರಮ ತೆಗೆದು ಕೊಳ್ಳುತ್ತಿಲ್ಲ. ಇದರ ವಿರುದ್ಧ ಜನಜಾಗೃತಿಗಾಗಿ ಆರ್‌ಟಿಐ ಕಾರ್ಯಕರ್ತರು ಜಿಲ್ಲೆಯಾದ್ಯಂತ ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಬ್ರಹ್ಮಾವರ ಸದಾಶಿವ ಶೆಟ್ಟಿ ವಹಿಸಿದ್ದರು. ಕಾರ್ಮಿಕ ಮುಖಂಡ ವೆಂಕಟೇಶ್ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಟಿಐ ಕಾರ್ಯಕರ್ತರಾದ ಶೇಖರ ಹಾವಂಜೆ, ಎಚ್. ವಸಂತ ಹೆಗ್ಡೆ ಬೈಂದೂರು, ಗೋವಿಂದ ನಾಯ್ಕನಕಟ್ಟೆ, ಮಂಜುನಾಥ ಹೆಬ್ಬಾರ್, ಸುದೇಶ ಶೆಟ್ಟಿ ಆರ್ಡಿ, ಅಝೀಝ್ ಗಂಗೊಳ್ಳಿ ಮಾತನಾಡಿದರು.
ಸುಭಾಶ್ಚಂದ್ರ ಶೆಟ್ಟಿ ಕುಂದಾಪುರ, ಸಂಜೀವ ಆಚಾರ್ ಕಳವಾಡಿ, ಉದಯ ದೇವಾಡಿಗ ಕೊಟೇಶ್ವರ, ಸದಾಶಿವ ಕುಂದೇಶ್ವರ, ಬಿ.ಶ್ರೀನಿವಾಸ ಉಪ್ಪುಂದ, ದೊಂಬೆ ಶೇಷಗಿರಿ ಮಾಸ್ಟರ್, ಭಾಸ್ಕರ್ ಶೆಟ್ಟಿ ಬಾಡಾ, ಹೂವಯ್ಯ ಖಾರ್ವಿ ಉಪ್ಪುಂದ, ರಾಘವೇಂದ್ರ ಬೈಂದೂರು, ಮಹೇಶ್ ಉಡುಪ ಕೆಂಚನೂರು, ಸುಬ್ರಹ್ಮಣ್ಯ ಹೆರಂಜಾಲ್, ಜಯಪ್ರಕಾಶ ಬ್ರಹ್ಮಾವರ, ಸುಭಾಷ್ ಉಪ್ಪುಂದ, ಬ್ರಹ್ಮಾವರ ಉಮೇಶ ಪೂಜಾರಿ, ವಾಸುದೇವ ಪ್ರಭು ಸಿದ್ದಾಪುರ, ವಿಜಯ ಕುಮಾರ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.
ಆರ್‌ಟಿಐ ಕಾರ್ಯಕರ್ತರ ಬೆಂದೂರು ತಾಲೂಕು ಸಂಘದ ನೂತನ ಅಧ್ಯಕ್ಷ ರಾಗಿ ಗಣೇಶ ಮೊಗವೀರ ಬೈಂದೂರು, ಉಪಾಧ್ಯಕ್ಷರಾಗಿ ನಾರಾಯಣ ಕುಮಾರ ಕಳವಾಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿಘ್ನೇಶ್ ಕಾಲ್ತೋಡು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.