ಜು.14ರಂದು ನಾಟೆಕಲ್ ನಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

Update: 2022-06-12 13:45 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ  ಮಂಗಳಾ ಯೋಜನೆ - ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದ  ಅಡಿಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಜೆ.ಸಿ.ಐ. ಮಂಗಳಗಂಗೋತ್ರಿ ಕೊಣಾಜೆ ಹಾಗೂ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ  ನಾಟೆಕಲ್ ಇವುಗಳ  ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

ಜು.14 ರಂದು 9.30 ರಿಂದ ನಾಟೆಕಲ್ ನ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು  ಶಾಸಕ ಯು. ಟಿ. ಖಾದರ್  ಉದ್ಘಾಟಿಸಲಿದ್ದು,  ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ  ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ  ಅಧ್ಯಕ್ಷತೆ ವಹಿಸಲಿರುವರು. ಸಂಚಾರಿ ನೇತ್ರ ಘಟಕ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ನೇತ್ರಾಧಿಕಾರಿ ಡಾ. ಅನಿಲ್  ರಾಮಾನುಜಂ, ನಾಟೆಕಲ್ ಆರೋಗ್ಯ ಕೇಂದ್ರದ  ವೈದ್ಯಾಧಿಕಾರಿ ಡಾ. ಹರ್ಷಿತಾ, ವೈದ್ಯಾಧಿಕಾರಿಗಳು, ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ನ ಡಾ. ಗೌರಿ ಪೈ,  ಜೇಸಿಐ ಅಧ್ಯಕ್ಷರಾದ  ಕಮಲಾಕ್ಷ ಶೆಟ್ಟಿಗಾರ್,  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕುಲಸಚಿವರಾದ ಪ್ರೊ. ಕಿಶೋರ್ ಕುಮಾರ್ ಸಿ. ಕೆ. ಮಂಗಳಾ ಯೋಜನೆ ಸಂಯೋಜಕ , ಪ್ರೊ. ಪ್ರಶಾಂತ  ನಾಯ್ಕ,  ಡಾ.  ಯಶಸ್ವಿನಿ ಭಟ್ಟಂಗಾಯ  ಉಪಸ್ಥಿತರಿರುವರು.

ಶಿಬಿರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು; ಜಿಲ್ಲಾ ಸಂಚಾರಿ ನೇತ್ರ ಘಟಕ ಹಾಗೂ  ಕೆ.ಎಂ.ಸಿ. ಯ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News