ಕೆಟ್ಟ ವ್ಯಸನಗಳು ವಿದ್ಯಾರ್ಥಿ ಜೀವನಕ್ಕೆ ಮಾರಕ: ಪ್ರೊ.ಗೀತಾ ಮಯ್ಯ

Update: 2022-06-12 14:31 GMT

ಶಿರ್ವ : ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ತಂಬಾಕುಯುಕ್ತ ಪದಾರ್ಥಗಳು, ಮದ್ಯಪಾನದಿಂದ ಯುವ ಸಮುದಾಯ ದೂರವಿದ್ದು, ಕಲಿಕೆ, ಸಾಧನೆಯತ್ತ ಗಮನ ನೀಡಬೇಕು. ಜೀವನದಲ್ಲಿ ಯಶಸ್ಸು ಪಡೆಯಲು ನಿರಂತರ ಅಧ್ಯಯನ ಮಾಡಬೇಕು. ಕೆಟ್ಟ ವ್ಯವಸನಗಳು ವಿದ್ಯಾರ್ಥಿ ಜೀವನಕ್ಕೆ ಮಾರಕವಾಗಿದೆ ಎಂದು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ  ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಮುಖ್ಯಸ್ಥೆ ಪ್ರೊ.ಗೀತಾ ಮಯ್ಯ ಹೇಳಿದ್ದಾರೆ.

ಬಂಟಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ ಕಾಪು ತಾಲೂಕು ಕಳತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಜರಗಿದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲೆ ಶಮೀನಾ ಬೆಳೆಕೆರೆ ವಹಿಸಿದ್ದರು. ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರೋಶನ್ ಡೇವಿಡ್,  ರಾಯನ್ ಮತಾಯಸ್, ಕಾಲ್ವಿನ್ ಡಿಸೋಜ, ಜೀವನ್, ಸಮುದಾಯ ಆರೋಗ್ಯಾಧಿಕಾರಿಗಳಾದ  ಸಂದೇಶ್, ಸನತ್ ಉಪಸ್ಥಿತರಿದ್ದರು.  

ಶಿವನಗೌಡ ಹಿರೇಗೌಡರ್ ಸ್ವಾಗತಿಸಿದರು. ಗುರುರಾಜ ರಾವ್ ವಂದಿಸಿದರು. ವಿನಯ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News