×
Ad

ಮೆಗಾ ಸ್ಕಾಲರ್‌ ಶಿಪ್ ಸ್ಪರ್ಧೆ: ಜಿಲ್ಲೆಯ 807 ಅಭ್ಯರ್ಥಿಗಳ ಆಯ್ಕೆ

Update: 2022-06-13 20:05 IST

ಉಡುಪಿ : ಉನ್ನತಿ ಕೆರಿಯರ್ ಅಕಾಡೆಮಿ ಹಾಗೂ ಸಂಚಲನ ಸ್ವಯಂ ಸೇವಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಮಟ್ಟದ ಉನ್ನತಿ ಸಂಚಲನ ಮೆಗಾ ಶಿಪ್ ಸ್ಪರ್ಧೆಯಲ್ಲಿ ೮೦೭ ವಿದ್ಯಾರ್ಥಿ ಗಳು ವಿಜೇತರಾಗಿದ್ದಾರೆ.

ಜಿಲ್ಲೆಯ 25 ಪದವಿ ಕಾಲೇಜಿನ 1144 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಸ್ಪರ್ಧೆಯಲ್ಲಿ ೮೦೭ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲೆಯ ೫೩ ವಿದ್ಯಾರ್ಥಿಗಳು ಸಂಪೂರ್ಣ ದತ್ತು ಸ್ವೀಕಾರಕ್ಕೆ, ೯೨ ವಿದ್ಯಾರ್ಥಿಗಳು ಶೇ.೭೫ ಸ್ಕಾಲರ್‌ಶಿಪ್‌ಗೆ, ೧೧೪ ವಿದ್ಯಾರ್ಥಿಗಳು ಶೇ.೫೦ ಸ್ಕಾಲರ್ ಶಿಪ್‌ಗೆ, ೧೭೬ ವಿದ್ಯಾರ್ಥಿಗಳು ಶೇ.೨೫ ಸ್ಕಾಲರ್‌ಶಿಪ್‌ಗೆ ಹಾಗೂ ೪೨೫ ವಿದ್ಯಾರ್ಥಿಗಳು ೨೦೦೦ ರೂ.ವರೆಗಿನ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿದ್ದಾರೆ.

ಒಟ್ಟಾರೆ ಜಿಲ್ಲೆಯ ೮೦೭ ವಿದ್ಯಾರ್ಥಿಗಳು ಈ ಸ್ಪರ್ಧೆಯ ಮೂಲಕ ಮುಂದಿನ ೩ ತಿಂಗಳ ಅವಧಿಯಲ್ಲಿ ತರಬೇತಿ ಪಡೆದು ಉತ್ತಮ ಉದ್ಯೋಗವಕಾಶವನ್ನು ಗಿಟ್ಟಿಸಲಿದ್ದಾರೆ. ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಜೂ.೨೦ರೊಳಗೆ ಸ್ಕಾಲರ್ ಶಿಪ್ ವಿತರಿಸಲಾಗುವುದು ಎಂದು ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News