ಮದಗಗಳ ಪುನರುಜ್ಜೀವನ ಕರಾವಳಿ ಪರಿಸರಕ್ಕೆ ಪೂರಕ: ಪಿಯುಷ್ ರಂಜನ್
ಬ್ರಹ್ಮಾವರ : ಮದಗಗಳ ಪುನರುಜ್ಜೀವನ ಮಾಡುವ ಮೂಲಕ ಜಲಶಕ್ತಿ ಅಭಿಯಾನದಡಿ ಕಾಡೂರು ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನ ಮಾಡಲಾಗಿರುವ ಕಾರ್ಯಚಟುವಟಿಕೆಗಳು ಮಾದರಿಯಾಗಿದ್ದು, ಕರಾವಳಿ ಪರಿಸರಕ್ಕೆ ಪೂರಕವಾಗಿದೆಂದು ಕೇಂದ್ರದ ರಕ್ಷಣಾ ಸಚಿವಾಲಯದ ನಿರ್ದೇಶಕ ಹಾಗೂ ಜಲಶಕ್ತಿ ಕೇಂದ್ರ ಅಭಿಯಾನದ ನೋಡೆಲ್ ಅಧಿಕಾರಿ ಪಿಯುಷ್ ರಂಜನ್ ತಿಳಿಸಿದ್ದಾರೆ.
ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದ ಕ್ಷೇತ್ರ ಭೇಟಿಗಾಗಿ ಕಾಡೂರು ಗ್ರಾಪಂಗೆ ಮಂಗಳವಾರ ಆಗಮಿಸಿದ ಅವರು ಸಾಮಾಜಿಕ ಪರಿಶೋಧನಾ ಸಭೆಯನ್ನು ದ್ದೇಶಿಸಿ ಅವರು ಮಾತನಾಡುತಿದ್ದರು. ಅತೀ ಕಡಿಮೆ ಸಂಪನ್ಮೂಲದ ಬಳಕೆ, ನಾಗರಿಕರ ಸಹಭಾಗಿತ್ವ ಹಾಗೂ ಕೃಷಿ-ಪರಿಸರಕ್ಕೆ ಭವಿಷ್ಯತ್‌ನಲ್ಲಿ ಅನುಕೂಲವಾ ಗುವ ನಿಟ್ಟಿನಲ್ಲಿ ಹನಿ ನೀರನ್ನೂ ವ್ಯರ್ಥವಾಗದಂತೆ ತಡೆಯುವ ಪ್ರಯತ್ನ ಈ ಪಂಚಾಯತ್ ಆಡಳಿತದ ಮೂಲಕ ಅನುಷ್ಠಾನವಾಗಿದೆ. ಮದಗಗಳ ರಕ್ಷಣೆಗೆ ಒತ್ತು ನೀಡಿರುವುದು ಪ್ರಶಂಸನೀಯ ಎಂದರು.
ಕೇಂದ್ರೀಯ ತಾಂತ್ರಿಕ ಅಧಿಕಾರಿ ಲಕ್ಷ್ಮೀನಾರಾಯಣ ತಾಕುರಾಳ್ ಮಾತನಾಡಿ, ಮದಗಗಳೂ ಕರಾವಳಿ ಪರಿಸರದ ಸಾಂಪ್ರದಾಯಿಕ ನೀರಿಂಗಿಸುವ ಮೂಲ ಗಳಾಗಿದ್ದು ನಾಗರಿಕರು ಈ ಭಾಗದಲ್ಲಿ ಮದಗ ಹೂಳೆತ್ತಲು ಕೆಲಸ ನಿರ್ವಹಿಸುತ್ತಿ ರುವುದು ಜಲಶಕ್ತಿ ಅಭಿಯಾನಕ್ಕೆ ದೊಡ್ಡ ಕೊಡುಗೆ ನೀಡಿದಂತಾಗಿದೆ. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿರುವುದು ಉತತಿಮ ಬೆಳವಣಿಗೆ ಎಂದು ಹೇಳಿದರು.
ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಉಪಾಧ್ಯಕ್ಷೆ ಅಮಿತಾ ರಾಜೇಶ್, ಸದಸ್ಯರಾದ ಸತೀಶ ಕುಲಾಲ, ಗಿರಿಜಾ, ಜಲಂಧರ್, ನೋಡೆಲ್ ಅಧಿಕಾರಿ ಸುರೇಶ ಬಂಗೇರ, ಜಿಪಂ ಯೋಜನಾ ನಿರ್ದೇಶಕ ಬಾಬು, ಸಹಾಯಕ ಯೋಜನಾಧಿಕಾರಿ ಜೇಮ್ಸ್, ಬ್ರಹ್ಮಾವರ ತಾಪಂ ಕಾರ್ಯನಿರ್ವ ಹಣಾಧಿಕಾರಿ ಇಬ್ರಾಹಿಂಪುರ್, ಸಾಮಾಜಿಕ ಪರಿಶೋಧನಾಧಿಕಾರಿ ಹುಸೇನ್, ಶ್ರೀವಾಣಿ ಪ್ರೌಢಶಾಲೆ ಅಧ್ಯಾಪಕ ವಿಶ್ವನಾಥ ಶೆಟ್ಟಿ, ಸಾಮಾಜಿಕ ಪರಿಶೋಧನೆಯ ಸಂಪನ್ಮೂಲ ವ್ಯಕ್ತಿಗಳು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ನೆಹರು ಯುವಕೇಂದ್ರದ ಅಧಿಕಾರಿ ವಿಲ್‌ಫ್ರೆಡ್ ಡಿಸೋಜ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು. ಕಾಡೂರು ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು.