ದ.ಕ. ಜಿಲ್ಲೆಯಲ್ಲಿ ಬುಧವಾರ 12 ಕೋವಿಡ್ ಪ್ರಕರಣ ದೃಢ
Update: 2022-06-15 20:09 IST
ಮಂಗಳೂರು,ಜೂ.15: ದ.ಕ. ಜಿಲ್ಲೆಯಲ್ಲಿ ಬುಧವಾರ 12 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 38 ಸಕ್ರಿಯ ಪ್ರಕರಣವಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,35,676ಕ್ಕೇರಿದೆ. ಗುಣಮುಖರಾದವರ ಸಂಖ್ಯೆ 1,33,788ಕ್ಕೇರಿದೆ. ಮೃತಪಟ್ಟವರ ಸಂಖ್ಯೆ 1,850ಕ್ಕೇರಿದೆ.
ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ 96,212 ಪ್ರಕರಣ ದಾಖಲಿಸಿ 1,16,05,880 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ದ.ಕ.ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.