×
Ad

ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ವಿವಿಧ ತರಬೇತಿಗಳು

Update: 2022-06-16 17:23 IST

ಬ್ರಹ್ಮಾವರ : ಸ್ವಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗ ಅರಸುತ್ತಿರುವವರಿಗೆ ಆಶಾಕಿರಣವಾಗಿರುವ, ಯುವ ಜನತೆಗೆ ಸ್ವ ಉದ್ಯೋಗ ಕಲ್ಪಿಸಲು ನೆರವಾಗಿರುವ ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ನಡೆಯುವ ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಉಡುಪಿ ಜಿಪಂನ ಸಹಯೋಗದೊಂದಿಗೆ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್‌ನೊಂದಿಗೆ ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ನಿರುದ್ಯೋಗಿ ಯುವಕ-ಯುವತಿಯರಿಗೆ ಮುಂದಿನ ಎರಡು ತಿಂಗಳು ವಿವಿಧ ವಿಷಯಗಳಲ್ಲಿ ತರಬೇತಿಯನ್ನು ನೀಡಲಿದೆ.

ತರಬೇತಿ ವಿವರ: ಕೋಳಿ ಸಾಕಾಣಿಕೆ (ಜೂ.೨೦ರಿಂದ ೨೯ರವರೆಗೆ), ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ (ಜು.೪ರಿಂದ ಆ.೨ರವರೆಗೆ), ಇಲೆಕ್ಟ್ರಿಕಲ್ ಮೋಟಾರು ರೀವೈಂಡಿಂಗ್ (ಜು.೪ರಿಂದ ಆ.೨ರವರೆಗೆ), ಕೃಷಿ ಉದ್ಯಮಿ (ಜು.೧೧ರಿಂದ ೨೩ರವರೆಗೆ), ರೆಫ್ರಿಜರೇಷನ್ ಮತ್ತು ಏರ್‌ಕಂಡೀಶನಲ್ ಸರ್ವಿಸಿಂಗ್ (ಆ.೧ರಿಂದ ೩೦ರವರೆಗೆ) ಹಾಗೂ ಸೆಣಬು ಬ್ಯಾಗ್ ತಯಾರಿಕೆ (ಆ.೧ರಿಂದ ೧೩ರವರೆಗೆ) ತರಬೇತಿ ನೀಡಲಾಗುವುದು.

ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ ೧೮ರಿಂದ ೪೫ ವರ್ಷದೊಳಗಿನ ಬಿಪಿಎಲ್ ಕುಟುಂಬದ ಸದಸ್ಯರಾಗಿರಬೇಕು. ಕನ್ನಡ ಓದಲು, ಬರೆಯಲು ಬರುವ, ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಛಿಸುವವರು ತಮ್ಮ ಹೆಸರು, ವಿಳಾಸ, ಮೊಬೈಲ್ (ವಾಟ್ಸಪ್ ನಂ.) ನಂ., ನೀವು ಪಡೆಯಲು ಬಯಸುವ ತರಬೇತಿ ಕುರಿತು ಬರೆದು, ಜೊತೆಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್‌ನ ಝೆರಾಕ್ಸ್ ಸಹಿತ ಕೆಳಗಿನ ವಿಳಾಸಕ್ಕೆ ತಕ್ಷಣ ಅರ್ಜಿ ಸಲ್ಲಿಸಬಹುದು.

ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ೫೨ನೇ ಹೇರೂರು, ಬ್ರಹ್ಮಾವರ-೫೭೫೨೧೩ ಉಡುಪಿ ಜಿಲ್ಲೆ (ದೂರವಾಣಿ-ವಾಟ್ಸಪ್ ನಂ.: ೯೫೯೧೨೩೩೭೪೮, ೯೬೧೧೫೪೪೯೩೦) ಈ ವಿಳಾಸಕ್ಕೆ ಅರ್ಜಿ ಕಳುಹಿಸುವಂತೆ ರುಡ್‌ಸೆಟ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News