×
Ad

ಕಾಪು: ಭಾರೀ ಮಳೆಯಿಂದ 2 ಮನೆಗಳಿಗೆ ಹಾನಿ

Update: 2022-06-18 19:13 IST

ಉಡುಪಿ : ಕಳೆದ ಎರಡು ದಿನಗಳಿಂದ ಕಾಪು ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಎರಡು ಮನೆಗಳಿಗೆ ಭಾಗಶ: ಹಾನಿಯಾಗಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಎಲ್ಲೂರು ಗ್ರಾಮದ ಫಾತಿಮಾಬಿ ಎಂಬವರ ವಾಸದ ಮನೆ ಮಳೆಯಿಂದ ಹಾನಿಗೊಂಡಿದ್ದು 80ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಅದೇ ರೀತಿ ಉಳಿಯಾರಗೋಳಿ ಗ್ರಾಮದ ದುರ್ಗಾವತಿ ಎಂಬವರ ಮನೆಯೂ ಗಾಳಿ-ಮಳೆಯಿಂದ ಭಾಗಶ: ಹಾನಿಗೊಳಗಾಗಿದ್ದು 30 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News