×
Ad

ಪಿಯುಸಿ ಫಲಿತಾಂಶ; ಕುಂದಾಪುರ ತಾಲೂಕಿನ ಅಗ್ರಸ್ಥಾನಿಗರಿವರು

Update: 2022-06-18 21:36 IST

ಉಡುಪಿ, ಜೂ.೧೮: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರ ವೆಂಕಟರಮಣ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಮೈತ್ರೀಯ ಅವರು ವಿಜ್ಞಾನ ವಿಭಾಗದಲ್ಲಿ ೫೯೪ ಅಂಕಗಳನ್ನು ಗಳಿಸಿ ತಾಲೂಕಿಗೆ ಅಗ್ರಸ್ಥಾನಿಯಾಗಿದ್ದಾರೆ. ಕೋಟದ ವಿವೇಕ ಪ.ಪೂ.ಕಾಲೇಜಿನ ಶ್ರೇಯಾ ಆಚಾರ್ ಅವರು ೫೯೩ ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕೋಟ ವಿವೇಕ ಕಾಲೇಜಿನ ಸುಶ್ಮಿತಾ ಎಸ್.ಜಿ.ಗಾಣಿಗಾ ೫೯೩ ಅಂಕಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದೀಕ್ಷಾ ಭಟ್ ಹಾಗೂ ಅದೇ ಕಾಲೇಜಿನ ಪಂಚಮಿ ಕಿಣಿ ೫೯೨ ಅಂಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಕಾಪು ತಾಲೂಕಿನಲ್ಲಿ ಅದಮಾರು ಪೂರ್ಣಪ್ರಜ್ಞಾ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳಾದ ಅದಿತಿ ಬಿ. (೫೮೨), ಲವಿಟಾ ಮಥಾಯಿಸ್ (೫೬೪) ಹಾಗೂ ಅಶ್ವಿನಿ ದ್ಯಾಮಣ್ಣ ಸಾನಗಿನ (೫೫೯) ಕಲಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News