ಮನೆಗೆ ನುಗ್ಗಿ ನಗನಗದು ಕಳವು
Update: 2022-06-18 21:37 IST
ಮಲ್ಪೆ : ಮಲ್ಪೆ ನಾರಾಯಣ ಗುರು ಮಂದಿರ ಸಮೀಪದ ಮನೆಗೆ ಜೂ.೧೭ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸತೀಶ್ ಪೈ ಎಂಬವರ ಮನೆಯ ಮುಖ್ಯದ್ವಾರದ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ರೂಮಿನಲ್ಲಿದ್ದ ಗೊದ್ರೇಜ್ ಕಪಾಟಿನಲ್ಲಿದ್ದ ೩೬ ಗ್ರಾಂ ತೂಕದ ಚಿನ್ನದ ತುಳಸಿ ಹಾರ, ೧೨ ಗ್ರಾಂ ತೂಕದ ಚಿನ್ನದ ನವರತ್ನದ ಉಂಗುರ, ೮ ಗ್ರಾಂ ತೂಕದ ಚಿನ್ನದ ಉಂಗುರ, ೫ ಗ್ರಾಂ ತೂಕದ ಬಂಗಾರ ಕಿವಿಯ ಚೈನ್, ಚಿನ್ನದ ಮೂಗುತಿ, ಚಿನ್ನದ ಮುತ್ತಿನ ಸರ ಹಾಗೂ ನಗದು ೧೦ ಸಾವಿರ ರೂ. ಕಳವು ಮಾಡಿದ್ದಾರೆಂದು ದೂರಲಾಗಿದೆ.
ಕಳವಾದ ಒಟ್ಟು ೬೯.೫೦೦ ಗ್ರಾಂ ತೂಕದ ಚಿನ್ನದ ಮೌಲ್ಯ ೨ ಲಕ್ಷದ ೫೦ ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.