ದ್ವಿತೀಯ ಪಿಯು ಪರೀಕ್ಷೆ : ಕೆಜಿಎನ್‌ ಕಾಲೇಜಿಗೆ ಉತ್ತಮ ಫಲಿತಾಂಶ

Update: 2022-06-18 16:27 GMT

ಮಾಣಿ, ಜೂ.18: ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಅಧೀನದ  ಕೆಜಿಎನ್ ಪಿಯು ಕಾಲೇಜು ದ್ವಿತೀಯ ಪಿಯುಸಿ 2021-22ರ ಸಾಲಿನ  ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ (91 ಶೇ.) ಉತ್ತಮ ಫಲಿತಾಂಶ  ದಾಖಲಿಸಿದೆ. 

19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, 44 ವಿದ್ಯಾರ್ಥಿಗಳು ಪ್ರಥಮ ದರ್ಜೆ, 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 572 ಅಂಕಗಳನ್ನು ಪಡೆದಿರುವ ಫಾತಿಮತು ತಫ್ಕೀನಾ ಕಾಲೇಜಿಗೆ ಪ್ರಥಮ ಸ್ಥಾನಿಯಾದರೆ, 565 ಅಂಕಗಳನ್ನು ಪಡೆದು ಸುಮಯ್ಯತ್ ರಫೀಖಾ ಕಾಂತಡ್ಕ ದ್ವಿತೀಯ ಹಾಗೂ ರಮೀಝ್ (562) ತೃತೀಯ ಸ್ಥಾನ ಗಳಿಸಿದ್ದಾರೆ. 

ಉಳಿದಂತೆ ಆಯಿಷತ್ ತಶ್ರೀಫಾ ಕೋಲ್ಪೆ ಅಳಕೆಮಜಲು(549), ಫಾತಿಮತ್ ಶಾಹಿದಾ ಪಾಟ್ರಕೋಡಿ(549), ಶುಹದಾ ಶಾಂತಿನಗರ ಕಂಬಳಬೆಟ್ಟು(549) ಫಾತಿಮತುನ್ನಿಸಾ ಪಾಟ್ರಕೋಡಿ(548), ಮುಹಮ್ಮದ್ ಇಸ್ಮಾಯೀಲ್ ಬಿಲಾಲ್(542) ಅಂಕಗಳನ್ನು ಗಳಿಸಿದ್ದಾರೆ ಎಂದು ದಾರುಲ್ ಇರ್ಶಾದ್ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News