×
Ad

ಮುಕ್ತ ವ್ಯಾಪಾರ ಒಪ್ಪಂದ: 9 ವರ್ಷಗಳ ಬಳಿಕ ಭಾರತ-ಯುರೋಪ್ ಒಕ್ಕೂಟದ ಮಾತುಕತೆ ಆರಂಭ

Update: 2022-06-18 23:28 IST

ಹೊಸದಿಲ್ಲಿ, ಜೂ. 18: ಒಂಬತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಭಾರತ ಹಾಗೂ ಯುರೋಪ್ ಒಕ್ಕೂಟ (ಇಯು)ಮಾತುಕತೆಯನ್ನು ಮರು ಆರಂಭಿಸಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯ ಶನಿವಾರ ತಿಳಿಸಿದೆ. 

ಬ್ರುಸೆಲ್ಸ್‌ನಲ್ಲಿರುವ ಯುರೋಪ್ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಜೂನ್ 17ರಂದು ನಡೆದ ಕಾರ್ಯಕ್ರಮದಲ್ಲಿ ಈ ಮಾತುಕತೆಯನ್ನು ಮರು ಆರಂಭಿಸಲಾಗಿದೆ. ಭಾರತದ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹಾಗೂ ಯುರೋಪ್ ಕಮಿಷನ್‌ನ ಕಾರ್ಯಕಾರಿ ಉಪ ಆಯುಕ್ತ ವಾಲ್ಡಿಸ್ ಡೊಬ್ರೊವ್‌ಸ್ಕಿ  ಭಾರತ ಹಾಗೂ ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾತುಕತೆಯನ್ನು ಔಪಚಾರಿಕವಾಗಿ ಮರು ಆರಂಭಿಸಿದರು.   
ಇದಲ್ಲದೆ, ಹೂಡಿಕೆ ರಕ್ಷಣಾ ಒಪ್ಪಂದ (ಐಪಿಎ) ಹಾಗೂ ಭೌಗೋಳಿಕ ಸೂಚಕ (ಜಿಐ) ಒಪ್ಪಂದದ ಕುರಿತ ಮಾತುಕತೆಯನ್ನು ಕೂಡ ಆರಂಭಿಸಲಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಮಾತುಕತೆಯ ಮೊದಲ ಸುತ್ತ ಹೊಸದಿಲ್ಲಿಯಲ್ಲಿ ಜೂನ್ 27ರಂದು ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News