ಇಂಟರ್ನೆಟ್ ಎಕ್ಸ್‌ಪ್ಲೋರರ್‌ ಬ್ರೌಸರ್‌ ಗೆ ಸಮಾಧಿ ನಿರ್ಮಿಸಿದ ಅಭಿಮಾನಿಗಳು: ಫೋಟೊ ವೈರಲ್‌

Update: 2022-06-18 18:42 GMT
Getty Images/Alexander Hassenstein

ಸಿಯೋಲ್, ಜೂ.18: ಇಂಟರ್ನೆಟ್ ಬಳಕೆದಾರರ ನೆಚ್ಚಿನ ಬ್ರೌಸರ್ ಅಗಿದ್ದ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಸೇವೆಯನ್ನು ಮೈಕ್ರೊಸಾಫ್ಟ್ ಸಂಸ್ಥೆ ಸ್ಥಗಿತಗೊಳಿಸಿದ ಬಳಿಕ ಅದರ ಅಭಿಮಾನಿಗಳಿಂದ ಹಲವು ಪ್ರತಿಕ್ರಿಯೆಗಳು ಹರಿದುಬರುತ್ತಿವೆ. ಈ ಮಧ್ಯೆ, ದಕ್ಷಿಣ ಕೊರಿಯಾದ ಇಂಜಿನಿಯರ್ ಒಬ್ಬ ಇಂಟರ್ನೆಟ್ ಎಕ್ಸ್‌ಪ್ಲೋರರ್‌ ಗೆ ಸಮಾಧಿ ನಿರ್ಮಿಸಿ ‘ಆತ್ಮಕ್ಕೆ ಚಿರಶಾಂತಿ ಸಿಗಲಿ’ ಎಂದು ಹಾರೈಸಿರುವ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇಂಜಿನಿಯರ್ ಆಗಿರುವ ಕಿಯಾಂಗ್ ಜುಂಗ್ ಎಂಬಾತ ಗಿಯಾಂಗ್ಜು ನಗರದಲ್ಲಿ ತನ್ನ ಸಹೋದರನ ಕೆಫೆಯ ಮೇಲ್ಛಾವಣಿಯ ಮೇಲೆ ಈ ಸಮಾಧಿ ನಿರ್ಮಿಸಿದ್ದಾನೆ. ಸಮಾಧಿಯ ಮೇಲೆ ಎಕ್ಸ್‌ಪ್ಲೋರರ್‌ ನ ಲೋಗೋ ಆಗಿರುವ ಇಂಗ್ಲಿಷ್ ನ ‘ಇ’ ಅಕ್ಷರದ ಜತೆಗೆ ‘ಈತ ಇತರ ಬ್ರೌಸರ್ಗಳನ್ನು ಡೌನ್ಲೋಡ್ ಮಾಡಲು ಒಂದು ಉತ್ತಮ ಸಾಧನವಾಗಿದ್ದ’ ಬರೆಯಲಾಗಿದೆ. ಸಮಾಧಿ ನಿರ್ಮಿಸಲು 330 ಡಾಲರ್ ವೆಚ್ಚವಾಗಿದೆ . ತನ್ನ ವೃತ್ತಿಜೀವನದ ಪ್ರಮುಖ ಭಾಗವಾಗಿದ್ದ ಇಂಟರ್ನೆಟ್ ಎಕ್ಸ್‌ಪ್ಲೋರರ್‌ ನ ಅಂತ್ಯದಿಂದ ಅಪಾರ ನೋವಾಗಿದೆ. ಒಂದು ಕಾಲದಲ್ಲಿ ಇದು ಪ್ರಾಬಲ್ಯ ಸಾಧಿಸಿತ್ತು ಎಂದು ಜುಂಗ್ ಹೇಳಿದ್ದಾನೆ.ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಿರುವ ದಕ್ಷಿಣ ಕೊರಿಯಾದಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್‌ ಬಳಕೆದಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News