ರೈಲ್ವೆ ಟಿಕೆಟ್‌ ಬುಕಿಂಗ್: IRCTC ಯ ಇ-ವಾಲೆಟ್ ಗೆ ಹಣವನ್ನು ಸೇರಿಸುವುದು ಹೇಗೆ?; ಮಾಹಿತಿ ಇಲ್ಲಿದೆ

Update: 2022-06-19 12:20 GMT

IRCTC ಇ-ವ್ಯಾಲೆಟ್ ನಲ್ಲಿ ಬಳಕೆದಾರರು ತಮ್ಮ IRCTC ಖಾತೆಯಲ್ಲಿ ಆನ್‌ಲೈನ್‌ ಮೂಲಕ ಹಣ ಜಮಾ ಮಾಡಬಹುದು. ಇದರಿಂದ ಬೇಗನೇ ಬುಕಿಂಗ್ ಮಾಡಲು ಡಿಜಿಟಲ್ ಪಾವತಿಗಳಲ್ಲಿ ಸಹಾಯವಾಗುತ್ತದೆ. ಇದು ಬ್ಯಾಂಕ್ ಅವಲಂಬನೆ ಮತ್ತು ಪಾವತಿಯ ಹೆಚ್ಚಿನ ಪ್ರಕ್ರಿಯೆಗಳನ್ನು ಕಡಿಮೆ ಮಾಡುವ ಮೂಲಕ ಬುಕಿಂಗ್ ನ್ನು ಬೇಗನೇ ಮಾಡಬಹುದು.

ಪ್ರಯಾಣಿಕರು ತಮ್ಮ IRCTC ಇ-ವ್ಯಾಲೆಟ್ ಖಾತೆಯಲ್ಲಿ ಮೊತ್ತವನ್ನು ಠೇವಣಿ ಮಾಡಬಹುದು ಮತ್ತು ಅಗತ್ಯವಿದ್ದಾಗ ಅದನ್ನು ಬಳಸಬಹುದು.

 IRCTC ಇ-ವ್ಯಾಲೆಟ್ ನಲ್ಲಿ ನೋಂದಾಯಿಸಲು ಕ್ರಮಗಳು:

 ಹಂತ 1: IRCTC ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು IRCTC ಖಾತೆಗೆ ಲಾಗ್ ಇನ್ ಮಾಡಿ.

 ಹಂತ 2: IRCTC ಇ-ವ್ಯಾಲೆಟ್ ಮೆನು ಮೂಲಕ 'ಈಗ ನೋಂದಾಯಿಸಿ'(Register Now) ಆಯ್ಕೆಯನ್ನು ಆರಿಸಿ.

 ಹಂತ 3: ನೋಂದಾಯಿಸಲು ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಪರಿಶೀಲಿಸಿ.

 ಹಂತ 4: ಒಮ್ಮೆ KYC ಪರಿಶೀಲನೆಯನ್ನು ಮಾಡಿದ ನಂತರ, ಬಳಕೆದಾರರನ್ನು IRCTC ಇ-ವ್ಯಾಲೆಟ್ ನೋಂದಣಿ ಶುಲ್ಕಕ್ಕೆ ನಿರ್ದೇಶಿಸಲಾಗುತ್ತದೆ.

 ಹಂತ 5: ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ನೋಂದಣಿಯಾದ ಮೆಸೇಜ್‌ ಅನ್ನು ಪ್ರದರ್ಶಿಸಲಾಗುತ್ತದೆ ಮತ್ತು ಸ್ವಯಂಚಾಲಿತವಾಗಿ ಲಾಗ್ ಔಟ್ ಮಾಡಲಾಗುತ್ತದೆ.


 IRCTC ಇ-ವ್ಯಾಲೆಟ್‌ಗೆ ಹಣವನ್ನು ಸೇರಿಸುವ ಹಂತಗಳು:

 ಹಂತ 1: ನಿಮ್ಮ IRCTC ಖಾತೆಗೆ ಹೋಗಿ.

 ಹಂತ 2: IRCTC ಇ-ವ್ಯಾಲೆಟ್ ಠೇವಣಿ ಆಯ್ಕೆಯನ್ನು ಆರಿಸಿ.

 ಹಂತ 3: ಠೇವಣಿ ಮಾಡಬೇಕಾದ ಮೊತ್ತವನ್ನು ಟೈಪ್ ಮಾಡಿ, ಅಂದರೆ ಕನಿಷ್ಠ 100 ರೂ.ಗಳಿಂದ ಗರಿಷ್ಠ 10,000 ರೂ.ವರೆಗೆ

 ಹಂತ 4: ಮುಂದೆ, ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಪಾವತಿಗಾಗಿ ಸಲ್ಲಿಸುವುದನ್ನು ಟ್ಯಾಪ್ ಮಾಡಿ.  ಯಶಸ್ವಿ ಪಾವತಿಗಾಗಿ ದೃಢೀಕರಣ ಸಂದೇಶವು ಲಭ್ಯವಿರುತ್ತದೆ.

 ಹಂತ 6: ಅಂತಿಮವಾಗಿ, ಇತರೆ ಪಾವತಿ ವಿಧಾನಗಳೊಂದಿಗೆ ಹೆಚ್ಚಿನ ಕಷ್ಟಗಳಿಲ್ಲದೇ IRCTC eWallet ಪಾವತಿಯ ಮೂಲಕ ಬುಕಿಂಗ್ ಮಾಡಲು ಸಾಧ್ಯವಾಗುತ್ತದೆ.  ಮತ್ತು ಟಿಕೆಟ್ ರದ್ದುಗೊಂಡರೆ, ಮರುಪಾವತಿಯನ್ನು ನಿಮ್ಮ ವ್ಯಾಲೆಟ್‌ಗೆ ವಾಪಸ್ ಸೇರಿಸಲಾಗುತ್ತದೆ. 

ಯಾವುದೇ ಟ್ರಾವೆಲ್‌ ಏಜೆನ್ಸಿಗಳ ಮೂಲಕ ರೈಲು ಟಿಕೆಟ್‌ ಗಳನ್ನು ಬುಕ್‌ ಮಾಡುವ ಬದಲು ನಿಮ್ಮ ಪ್ರಯಾಣದ ಸಮಯವನ್ನಾಧರಿಸಿ ನಿಮಗೆ ಖುದ್ದಾಗಿ ಟಿಕೆಟ್‌ ಅನ್ನು ಖರೀದಿಸಬಹುದಾಗಿದೆ. ಇದರ ಪ್ರಕ್ರಿಯೆಗಳನ್ನು ಸರಿಯಾಗಿ ತಿಳಿದುಕೊಂಡಲ್ಲಿ ಒಂದಿಷ್ಟು ಹಣ ಉಳಿತಾಯ ಮಾಡಲೂ ಸಾಧ್ಯವಾಗುತ್ತದೆ. 

ಇದನ್ನೂ ಓದಿ: ರೈಲು ಟಿಕೆಟ್‌ ನಲ್ಲಿರುವ ಈ ಐದು ನಂಬರ್‌ ಗಳಲ್ಲಿ ಎಷ್ಟೆಲ್ಲಾ ಮಾಹಿತಿಗಳು ಅಡಗಿವೆ ಗೊತ್ತೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News