ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಗಾಗಿ ದೊಂಬಿ: ಸೈನಿಕರಿಂದ ಗುಂಡು ಹಾರಾಟ

Update: 2022-06-19 17:50 GMT

ಕೊಲಂಬೊ,ಜೂ.19: ದಿವಾಳಿಯಾಗಿರುವ ದ್ವೀಪರಾಷ್ಟ್ರ ಶ್ರೀಲಂಕಾದ ವಿವಿಧೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ಗಾಗಿ ರವಿವಾರ ಮಾರುದ್ದದ ಸರತಿಸಾಲುಗಳು ಕಂಡುಬಂದಿದ್ದು, ತೈಲಕ್ಕಾಗಿ ಜನ ಮುಗಿಬೀಳುತ್ತಿದ್ದಾರೆ. ವಿಸುವಮಾಡು ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ದೊಂಬಿಯಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಸೈನಿಕರು ಗುಂಡು ಹಾರಿಸಿದ್ದಾರೆ.
    
ಶನಿವಾರ ರಾತ್ರಿ ಪೆಟ್ರೋಲ್‌ಬಂಕ್‌ನ ಕಾವಲುಗಾರನ ಮೇ 20-30ರಷ್ಟಿದ್ದ ಗುಂಪೊಂದು ಕಲ್ಲೆಸೆಯತೊಡಗಿದಾಗ, ಅವರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದು, ನಾಲ್ವರು ನಾಗರಿಕರು ಹಾಗೂ ಮೂವರು ಯೋಧರು ಗಾಯಗೊಂಡಿದ್ದಾರೆ. ಶ್ರೀಲಂಕಾದ ವಿವಿಧೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ತೈಲದ ಕೊರತೆ ಉಂಟಾಗಿದ್ದು, ರೊಚ್ಚಿಗೆದ್ದ ವಾಹನ ಸವಾರರು ಪ್ರತಿಭಟನೆ ನಡೆಸಿದರು ಹಾಗೂ ಸೇನಾಪಡೆಗಳ ಜೊತೆ ಘರ್ಷಣೆಗೆ ಇಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

 ಸ್ವಾತಂತ್ರ ಆನಂತರದ ಅತ್ಯಂತ ಘೋರ ಆರ್ಥಿಕ ಬಿಕ್ಕಟ್ಟನ್ನು ಶ್ರೀಲಂಕಾ ಎದುರಿಸುತ್ತಿದೆ. ಆಹಾರ, ತೈಲ ಹಾಗೂ ಔಷಧಿಗಳು ಸೇರಿದಂತೆ ಅವಶ್ಯಕ ಸಾಮಾಗ್ರಿಗಳ ಆಮದಿಗೆ ಡಾಲರ್ ರೂಪದಲ್ಲಿ ಹಣವನ್ನು ಪಡೆಯಲು ಅದಕ್ಕೆ ಅಸಾಧ್ಯವಾದಂತಹ ಪರಿಸ್ಥಿತಿಯುಂಟಾಗಿದೆ.

2.20 ಕೋಟಿ ಜನಸಂಖ್ಯೆಯ ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ ಆಹಾರವಸ್ತುಗಳು ಹಾಗೂ ತೈಲದ ತೀವ್ರ ಕೊರತೆ ತಲೆದೋರಿದೆ. ಇಂಧನದ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಪೆಟ್ರೋಲ್ ಬಂಕ್ ಗಳನ್ನು ಕಾವಲಿಗಾಗಿ ಪೊಲೀಸರು ಹಾಗೂ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News