ಮೂರನೇ ವಿಶ್ವಯುದ್ಧಕ್ಕೆ ಸಿದ್ಧರಾಗಿ: ಬ್ರಿಟಿಶ್ ಪಡೆಗಳಿಗೆ ಸೇನಾ ಜನರಲ್ ಪ್ಯಾಟ್ರಿಕ್ ಸ್ಯಾಂಡರ್ಸ್ ಕರೆ

Update: 2022-06-19 18:01 GMT
PHOTO: Alamy

 ಲಂಡನ್,ಜೂ.19: ಸಂಭಾವ್ಯ ಮೂರನೇ ವಿಶ್ವಯುದ್ಧಕ್ಕೆ ಸನ್ನದ್ಧರಾಗಿರುವಂತೆ ಬ್ರಿಟನ್ನ ಉನ್ನತ ಸೇನಾ ಜನರಲ್ ಸರ್ ಪ್ಯಾಟ್ರಿಕ್ ಸ್ಯಾಂಡರ್ಸ್ ರವಿವಾರ ಬ್ರಿಟಿಶ್ ಸೈನಿಕರಿಗೆ ಕರೆ ನೀಡಿದ್ದಾರೆ.

ಉಕ್ರೇನ್ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಯುರೋಪ್ನಲ್ಲಿ ಮತ್ತೊಮ್ಮೆ ಹೋರಾಡಲು ಬ್ರಿಟಿಶ್ ಸೈನಿಕರು ಸಿದ್ಧರಾಗಿರಬೇಕೆಂದು ಅವರು ಹೇಳಿದರು. ಜನರಲ್ ಮಾರ್ಕ್ ಕ್ಯಾರ್ಲ್ಟನ್ ಸ್ಮಿತ್ ಅವರಿಂದ ಅಧಿಕಾರವನ್ನು ಹಸ್ತಾಂತರಿಸಿಕೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಮಿತ್ರರ ಜೊತೆಗೂಡಿ ಕಾದಾಡುವ ಹಾಗೂ ಯುದ್ಧದಲ್ಲಿ ರಶ್ಯನ್ನರನ್ನು ಸೋಲಿಸಲು ಸಮರ್ಥವಾದಂತಹ ಸೇನೆಯನ್ನು ರೂಪಿಸುವುದು ಈಗಿನ ಜ್ವಲಂತ ಅನಿವಾರ್ಯತೆಯಾಗಿದೆ’’ ಎಂದು ಪ್ಯಾಟ್ರಿಕ್ ತಿಳಿಸಿದರು.

1941ರಿಂದೀಚೆಗೆ ಯುರೋಪ್ನಲ್ಲಿ ಭೂಖಂಡದ ಪ್ರಬಲ ಶಕ್ತಿಯೊಂದು ಒಳಗೊಂಡಿರುವ ಭೂಸಮರದಲ್ಲಿ ಬ್ರಿಟಿಶ್ ಸೇನೆಯ ಕಮಾಂಡ್ ವಹಿಸಿರುವ ಪ್ರಪ್ರಥಮ ಸೇನಾ ವರಿಷ್ಠ ನಾನಾಗಿದ್ದೇನೆ’’ ಎಂದು ಜನರಲ್ ಸ್ಯಾಂಡರ್ಸ್ ತಿಳಿಸಿದ್ದಾರೆ.

56 ವರ್ಷ ವಯಸ್ಸಿನ ಸ್ಯಾಂಡರ್ಸ್ ಅವರು ಈ ಹಿಂದೆ ಉತ್ತರ ಐಯರ್ಲ್ಯಾಂಡ್, ಕೊಸೊವೊ,ಇರಾಕ್ ಹಾಗೂ ಅಫ್ಘಾನಿಸ್ತಾನದಲ್ಲಿ ಬ್ರಿಟನ್ ಸೇನೆಯ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News