ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್

Update: 2022-06-20 02:47 GMT

ಪ್ಯಾರೀಸ್: ಫ್ರಾನ್ಸ್ ನಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಅಧ್ಯಕ್ಷ ಇಮ್ಮಾನ್ಯುವೆಲ್ ಮ್ಯಾಕ್ರೋನ್ ರವಿವಾರ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಹುಮತ ಸಾಧಿಸಿದ ಎಡಪಂಥೀಯ ಮತ್ತು ಕಟ್ಟಾ ಬಲಪಂಥೀಯರ ಒಕ್ಕೂಟಕ್ಕೆ ಇದು ತೀವ್ರ ಹಿನ್ನಡೆಯಾಗಿದೆ. ಇದು ಅಧ್ಯಕ್ಷರ ಎರಡನೇ ಅವಧಿಯ ಉದ್ದೇಶಿತ ಸುಧಾರಣೆಗಳಿಗೆ ದೊಡ್ಡ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಅಚ್ಚರಿಯ ಬೆಳವಣಿಗೆಯಿಂದ ದೇಶ ರಾಜಕೀಯ ಗೊಂದಲಕ್ಕೆ ಸಿಲುಕಿಕೊಂಡಿದ್ದು, ಆಡಳಿತಾರೂಢ ಮೈತ್ರಿ ಪಕ್ಷ ಹೊಸ ಮಿತ್ರರನ್ನು ಹುಡುಕಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಮ್ಯಾಕ್ರೋನ್ (44) ಅವರ ಆಂತರಿಕ ಸಮಸ್ಯೆಗಳಿಂದಾಗಿ, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯ ಬೆಂಕಿಯನ್ನು ಶಮನಗೊಳಿಸುವ ಅವರ ಪ್ರಯತ್ನಕ್ಕೂ ತೀವ್ರ ಹಿನ್ನಡೆಯಾಗಿದೆ. 

ಮ್ಯಾಕ್ರೋನ್ ಅವರ "ಟುಗೆದರ್" ಮೈತ್ರಿಕೂಟ ಮುಂದಿನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೊಡ್ಡ ಪಕ್ಷವಾಗಿತ್ತು. ಆಂತರಿಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಶೇಕಡ 97ರಷ್ಟು ಮತಗಳ ಎಣಿಕೆ ಮುಗಿದಾಗ ಈ ಮೈತ್ರಿಕೂಟ 234 ಸ್ಥಾನಗಳನ್ನು ಪಡೆದಿದೆ. ಆದರೆ 577 ಸದಸ್ಯ ಬಲದ ಸದನದಲ್ಲಿ ಬಹುಮತ ಸಾಧಿಸಲು ಮೈತ್ರಿಕೂಟಕ್ಕೆ 289 ಸ್ಥಾನಗಳ ಅಗತ್ಯವಿದೆ.

"ಈ ಪರಿಸ್ಥಿತಿ ಅಪಾಯ ಸಾಧ್ಯತೆಗೆ ಕಾರಣವಾಗಿದೆ. ಈ ಸವಾಲನ್ನು ಎದುರಿಸಲೇಬೇಕಿದೆ. ಕಾರ್ಯಸಾಧು ಬಹುಮತ ಸಾಧಿಸುವ ನಿಟ್ಟಿನಲ್ಲಿ ನಾಳೆಯಿಂದಲೇ ಕಾರ್ಯಪ್ರವೃತ್ತರಾಗುತ್ತೇವೆ" ಎಂದು ಪ್ರಧಾನಿ ಎಲಿಸಬೆತ್ ಬೋನ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News