×
Ad

ಅಗ್ನಿಪಥ್ ಯೋಜನೆ ಹಿಂಪಡೆಯಲು ಒತ್ತಾಯಿಸಿ ದಿಲ್ಲಿಯಲ್ಲಿ ರೈಲು ತಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು

Update: 2022-06-20 14:08 IST
Twitter/@ANI

ಹೊಸದಿಲ್ಲಿ: 'ಅಗ್ನಿಪಥ' ರಕ್ಷಣಾ ನೇಮಕಾತಿ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ರಾಷ್ಟ್ರ ರಾಜಧಾನಿಯ ಕನ್ನಾಟ್ ಪ್ಲೇಸ್ ಬಳಿಯ ಶಿವಾಜಿ ಸೇತುವೆ ರೈಲು ನಿಲ್ದಾಣದಲ್ಲಿ ರೈಲನ್ನು ತಡೆದರು.

ಪೊಲೀಸರು ಹಾಗೂ  ಭದ್ರತಾ ಸಿಬ್ಬಂದಿ ಹಳಿಯನ್ನು ತೆರವುಗೊಳಿಸಿದರು.ಸುಮಾರು ಅರ್ಧ ಗಂಟೆಯ ನಂತರ ರೈಲು ಸಂಚಾರ ಪುನರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ.

ಹಲವಾರು ಪ್ರತಿಭಟನಾಕಾರರನ್ನು ಪೊಲೀಸ್ ಸಿಬ್ಬಂದಿ ಹಳಿಗಳಿಂದ ಮತ್ತು ನಿಲ್ದಾಣದಿಂದ ತೆರವುಗೊಳಿಸಲು ಪ್ರಯತ್ನಿಸಿ ತಮ್ಮ ವಶಕ್ಕೆ ಪಡೆದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅಗ್ನಿಪಥ’ ಯೋಜನೆಯನ್ನು ಸರಕಾರ ಹಿಂಪಡೆಯಬೇಕು, ದೇಶ ಸೇವೆ ಮಾಡಲು ಬಯಸುವ ನಿರುದ್ಯೋಗಿ ಯುವಕರಿಗಾಗಿ ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News