ಅಲ್‍ ಬದ್ರಿಯಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕ ಸಮಾವೇಶ

Update: 2022-06-20 10:46 GMT

ಕೃಷ್ಣಾಪುರ: ಮಕ್ಕಳ ಜೊತೆ ನಾವು ಮಾದರಿಯಾಗಿ ವರ್ತಿಸಿ, ಅವರ ಸಕಾರಾತ್ಮಕ ವರ್ತನೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿದಾಗ ಅವರಲ್ಲಿ ಶಿಸ್ತು ತನ್ನಿಂದ ತಾನೇ ಬೆಳೆಯುತ್ತದೆ ಎಂದು ಡಾ. ರಮೀಳ ಶೇಖರ್ ಹೇಳಿದರು.‌

ಅವರು ಅಲ್‍ ಬದ್ರಿಯಾ ಶಿಕ್ಷಣ ಸಂಸ್ಥೆಯ ಶಿಕ್ಷಕ-ರಕ್ಷಕ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೋಷಕರಿಗೆ ಮಾಹಿತಿ ನೀಡಿದರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯ ಜೊತೆಗೆ ಪೋಷಕರು ಕೈ ಜೋಡಿಸಬೇಕೆಂದು ಕರೆ ನೀಡಿದರು.

ಸಂಸ್ಥೆಯ ಸಂಚಾಲಕರಾದ ಬಿ.ಎ. ನಝೀರ್‌ ಅವರು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅಬೂಬಕ್ಕರ್ ಕೃಷ್ಣಾಪುರ ವಹಿಸಿದ್ದರು.

ಸಂಸ್ಥೆಯ ಗೌರವಾಧ್ಯಕ್ಷರಾದ ಬಿ.ಎಂ. ಮಮ್ತಾಝ್ ಆಲಿ, ಉಪಾಧ್ಯಕ್ಷ ಝಾಕಿರ್ ಕೆ.ಎಂ., ಕಾರ್ಯದರ್ಶಿ ಅನ್ಸಾರ್ ಅಹ್ಮದ್, ಕೋಶಾಧಿಕಾರಿ ಶೌಕತ್ ಆಲಿ, ಮೊಹಮ್ಮದ್ ಮುಸ್ತಾಫ,  ಮೊಹಮ್ಮದ್ ಆಲಿ ತೋಟ, ಆಶಿಕ್, ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲೆ ವಿಲ್ಮಾ ಡಿಮೆಲ್ಲೊ ಪ್ರಾಸ್ತಾವಿಕ ಮಾತುಗಳನ್ನಾಡಿ ಪೋಷಕರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಮುಖ್ಯ ಶಿಕ್ಷಕ ಸತೀಶ ಎನ್ ರವರು ಶಾಲಾ ವರದಿಯನ್ನು ವಾಚಿಸಿದರು. ಸಂಸ್ಥೆಯ ಕಾರ್ಯದರ್ಶಿ ಅನ್ಸಾರ್ ಅಹ್ಮದ್‍ ವಂದಿಸಿದರು. ಶಿಕ್ಷಕಿಯರಾದ ವಿನ್ನಿ ಎಫ್ ಲೋಬೊ ಮತ್ತು ಪ್ರಮೀಳಾ ಜೆ. ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News