ಅಂಪೈರಿಂಗ್ ವೇಳೆ ಕ್ಯಾಚ್ ಪಡೆಯಲು ಮುಂದಾದ ಶ್ರೀಲಂಕಾದ ಕುಮಾರ ಧರ್ಮಸೇನಾ!

Update: 2022-06-21 08:03 GMT

ಕೊಲಂಬೊ: ಆಸ್ಟ್ರೇಲಿಯಾ  ವಿರುದ್ಧ ಮೊದಲ ಪಂದ್ಯವನ್ನು ಕಳೆದುಕೊಂಡ ನಂತರ ಸತತ ಎರಡು ಗೆಲುವುಗಳೊಂದಿಗೆ ಪುಟಿದೆದ್ದಿರುವ  ಶ್ರೀಲಂಕಾ ತಂಡ 5 ಪಂದ್ಯಗಳ ಸರಣಿಯನ್ನು ಕುತೂಹಲ ಘಟ್ಟಕ್ಕೆ ತಲುಪಿಸಿದೆ.   ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಂಡಿರುವ ಲಂಕಾ ತಂಡಕ್ಕೆ ಇದೀಗ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡು ಸೋಲಿಗೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವಿದೆ.

ಎರಡು ತಂಡಗಳು ರವಿವಾರ ಮೂರನೇ ಏಕದಿನ ಪಂದ್ಯವನ್ನಾಡಿದವು. ಆದರೆ ಈ ಪಂದ್ಯದಲ್ಲಿ  ಯಾವುದೇ ಶ್ರೀಲಂಕಾ ಅಥವಾ ಆಸ್ಟ್ರೇಲಿಯದ  ಆಟಗಾರರಿಗಿಂತ ಹೆಚ್ಚು ಗಮನ ಸೆಳೆದವರು ಅಂಪೈರ್ ಕುಮಾರ ಧರ್ಮಸೇನಾ.

ಲೆಗ್ ಸೈಡ್‌ನಲ್ಲಿ ಅಂಪೈರಿಂಗ್ ಮಾಡುವಾಗ ಪಂದ್ಯದ ವೇಳೆ ಕ್ಯಾಚ್ ಪಡೆಯಲು ಮುಂದಾದ  ಧರ್ಮಸೇನಾ ಎಲ್ಲರ ಗಮನ ಸೆಳೆದರು.

ಆಸ್ಟ್ರೇಲಿಯಾದ ಬ್ಯಾಟಿಂಗ್ ಸಮಯದಲ್ಲಿ ಅಲೆಕ್ಸ್ ಕ್ಯಾರಿ ಅವರು ಸ್ಕ್ವೇರ್-ಲೆಗ್ ನತ್ತ ಚೆಂಡನ್ನು ಅಟ್ಟಿದರು. ಅಲ್ಲಿ ನಿಂತಿದ್ದ ಅಂಪೈರ್ ಧರ್ಮಸೇನಾ ಶಾರ್ಟ್ ಬಾಲ್ ಅನ್ನು ಕ್ಯಾಚ್ ಪಡೆಯಲು ಮುಂದಾದರು.  ಪಂದ್ಯದಲ್ಲಿ ತಾನು ಅಂಪೈರ್ , ಫೀಲ್ಡರ್ ಅಲ್ಲ ಎಂಬ ಸತ್ಯ ತಕ್ಷಣವೇ ಅರಿವಾಗಿ  ಕೊನೆಯ ಕ್ಷಣದಲ್ಲಿ ಚೆಂಡನ್ನು ಪಡೆಯದೆ ಹಿಂದೆ ಸರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News