ಬಡಗಬೆಳ್ಳೂರು ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟನೆ, ವನಮಹೋತ್ಸವ

Update: 2022-06-22 08:04 GMT

ಬಡಗಬೆಳ್ಳೂರು: ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟನೆ ಮತ್ತು ವನಮಹೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.

ಶಾಲಾ ಸಂಚಾಲಕರು ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸದಸ್ಯರಾದ ಕೆ. ನರೇಂದ್ರನಾಥ್ ಭಂಡಾರಿ ಅವರ ಮುಂದಾಳತ್ವದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸಹಯೋಗದೊಂದಿಗೆ ಬಡಗಬೆಳ್ಳೂರು ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟನೆ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ರೋಟರಿ ಕ್ಲಬ್‌ ಅಧ್ಯಕ್ಷ ರೊಟೇರಿಯನ್ ಎಮ್.ಪಿ.ಎಚ್.ಎಫ್. ಶನ್‌ಫತ್ ಶರೀಫ್, ಉಪಾಧ್ಯಕ್ಷ ಕಿಶೋರ್ ಕುಮಾರ್, ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಖಜಾಂಚಿ ಸುರೇಶ್ ಸಾಲ್ಯಾನ್ ಮತ್ತು ಇತರ ಸದಸ್ಯರು ಹಾಗೂ ಶಾಲಾಭಿವೃದ್ಧಿ ಮಂಡಳಿಯ ಹಿರಿಯ ಸದಸ್ಯರಾದ ರಮೇಶ್ಚಂದ್ರ ಭಂಡಾರಿ, ಶಾಲಾ ಸಂಚಾಲಕರಾದ ಕೆ. ನರೇಂದ್ರನಾಥ್ ಭಂಡಾರಿ, ಶಾಲಾ ಮುಖ್ಯೋಪಾಧ್ಯಾಯರಾದ ಕೇಶವ ನಾಯ್ಕ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚೀಂದ್ರನಾಥ ರೈ, ನಿವೃತ್ತ ಶಿಕ್ಷಕರಾದ ಜಿ. ಗಂಗಾದರ ರೈ ಹಾಗು ಇತರರು ಹಾಜರಿದ್ದರು.

ಸಂಚಾಲಕರು ಕಾರ್ಯಕ್ರಮದ ವಿಷಯ ಪ್ರಸ್ತಾಪಿಸಿ, ಸ್ವಾಗತಿಸಿ, ಗ್ರಂಥಾಲಯಕ್ಕೆ ಬೇಕಾದ ಎರಡು ಕಪಾಟು ಗಳನ್ನು ಒದಗಿಸಿಕೊಟ್ಟ ರೋಟರಿ ಕ್ಲಬ್‌ನ ಅಧ್ಯಕ್ಷರ ಮತ್ತು ಇತರ ದಾನಿಗಳ ಸಹಾಯವನ್ನು ಸ್ಮರಿಸಿದರು.

ರೋಟರಿ ಕ್ಲಬ್‌ ಅಧ್ಯಕ್ಷರಾದ ಶನ್‌ಫತ್ ಶರೀಫ್ ಮತ್ತು ಶಾಲಾಭಿವೃದ್ಧಿ ಮಂಡಳಿಯ ಹಿರಿಯ ಸದಸ್ಯರಾದ ರಮೇಶ್ಚಂದ್ರ ಭಂಡಾರಿಯವರು ಶಾಲಾ ಗ್ರಂಥಾಲಯದ ಉದ್ಘಾಟನೆಯನ್ನು ನೆರವೇರಿಸಿ ಕ್ಲಬ್‌ನ ಸದಸ್ಯರ, ಶಾಲಾ ಹಿತೈಷಿಗಳ ಹಾಗೂ ಶಿಕ್ಷಕರ ಮತ್ತು ವಿದ್ಯಾರ್ಥಿ ವೃಂದದೊಂದಿಗೆ ಶಾಲಾ ವಠಾರದಲ್ಲಿ ವಿವಿಧ ಫಲವಸ್ತು ಗಳ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ರೋಟರಿ ಕ್ಲಬ್‌ನ ಅಧ್ಯಕ್ಷರು ಗ್ರಂಥಾಲಯ ಉದ್ಘಾಟನೆ ಮತ್ತು ಗಿಡನೆಡುವ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಟ್ಟ ಶಾಲಾ ಆಡಳಿತ ಮಂಡಳಿಯ ಸದಸ್ಯರಿಗೆ ಮತ್ತು ಶಾಲಾ ಸಂಚಾಲಕರಿಗೆ ಧನ್ಯವಾದಗಳನ್ನು ಸಮರ್ಪಿಸಿ, ಗ್ರಂಥಾಲಯದಿಂದ ಮಕ್ಕಳ ಕಲಿಕೆ, ಜ್ಞಾನ ವೃದ್ಧಿಗೆ ಹೆಚ್ಚಿನ ಉತ್ತೇಜನ ಸಿಗಲಿ ಎಂದು ಹಾರೈಸಿದರು. 

ರಮೇಶ್ಚಂದ್ರ ಭಂಡಾರಿಯವರು ವನಮಹೋತ್ಸವದ ಅಗತ್ಯದ ಬಗ್ಗೆ ತನ್ನ ಅನುಭವದ ಮಾತುಗಳನ್ನಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭಕೋರಿದರು.

ಕ್ಲಬ್‌ನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News