ಪರಿಶಿಷ್ಟ ಜಾತಿ ಮೀನುಗಾರರಿಗೆ ದೋಣಿ, ಸಲಕರಣೆ ವಿತರಣೆ

Update: 2022-06-22 15:19 GMT

ಮಲ್ಪೆ : ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ ಯೋಜನೆ ಯಡಿ ೨೦೨೧-೨೨ನೆ ಸಾಲಿನಲ್ಲಿ ಉಡುಪಿ ತಾಲೂಕಿನ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸಲಕರಣೆಗಳನ್ನು ಬುಧವಾರ ಹಸ್ತಾಂತರಿಸಲಾಯಿತು.

೪ ಫಲಾನುಭವಿಗಳಿಗೆ ತಲಾ ೩,೬೦,೦೦೦ರೂ.ನಂತೆ ಒಟ್ಟು ೧೪,೪೦,೦೦೦ರೂ.  ವೆಚ್ಚದಲ್ಲಿ ಎಫ್‌ಆರ್‌ಪಿ ದೋಣಿ, ಇಂಜಿನ್, ಬಲೆ, ಸಲಕರಣೆ, ಲೈಫ್‌ಬಾಯ್, ಲೈಫ್ ಜಾಕೆಟ್ ಹಾಗೂ ಐಸ್‌ಬಾಕ್ಸ್‌ಗಳನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಉಪ ನಿರ್ದೇಶಕ ಶಿವಕುಮಾರ್ ಜಿ.ಎಂ., ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಹಾಗೂ ಇಲಾಖಾ ಸಿಬ್ಬಂದಿ ರವಿಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News