ಯೆನೆಪೊಯ ವಿದ್ಯಾಸಂಸ್ಥೆಯಲ್ಲಿ ಕೆಜಿ ವಿಭಾಗದ ಶಿಕ್ಷಕರಿಗೆ ಕಾರ್ಯಗಾರ

Update: 2022-06-24 09:27 GMT

ಮಂಗಳೂರು : ಎಂಇಐಎಫ್‌ ಮಂಗಳೂರು ವಿಭಾಗದ 43 ವಿದ್ಯಾಸಂಸ್ಥೆಗಳ 120 ಕೆಜಿ ಶಿಕ್ಷಕರುಗಳಿಗೆ 2 ದಿನಗಳ ಕಾರ್ಯಗಾರವು ಯೆನೆಪೊಯ ವಿದ್ಯಾಸಂಸ್ಥೆ ಜಪ್ಪಿನಮೊಗರುನಲ್ಲಿ ನೆರವೇರಿತು.

ಇದರ ಉದ್ಘಾಟನೆಯನ್ನು ಸಂಸ್ಥೆಯ ನಿರ್ದೇಶಕರಾದ  ಅಬ್ದುಲ್ಲ ಜಾವಿದ್ ಯೆನೆಪೊಯ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಕಾಟಿಪಳ್ಳ ಮಿಸ್ಬಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಂ ಮುಮ್ತಾಝ್ ಅಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂಇಐಎಫ್‌ ಸಂಸ್ಥೆಯ ಅಧ್ಯಕ್ಷರಾದ ಮುಸಬ್ಬ ಪಿ ಬ್ಯಾರಿ ಪ್ರಸ್ತಾವನೆಗೈದರು. ಸಂಸ್ಥೆಯ ಪ್ರಾಂಶುಪಾಲರಾದ ಉಜ್ವಲ್ ಮೆನೇಜಸ್ ಸ್ವಾಗತಿಸಿದರು, ನಿರ್ದೇಶಕಿ ಮಿಶ್ರಿಯ ಜಾವಿದ್ ಯೆನೆಪೊಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಿ.ಎ ನಝೀರ್, ಅಬ್ದುರ್ರಹ್ಮಾನ್, ರಿಯಾಝ್ ಅಹ್ಮದ್, ಇಕ್ಬಾಲ್ ಕೃಷ್ಣಾಪುರ, ಶೈಖ್ ರಹ್ಮತುಲ್ಲಾ ಮತ್ತು ಜೋಕಟ್ಟೆ ಜೆಎಎಂಡಬ್ಲ್ಯೂಎ ಪ್ರತಿನಿಧಿ ಏರ್ಲೈನ್ಸ್ ಫಾರೂಕ್ ಭಾಗವಹಿಸಿದ್ದರು.

ಕ್ರಿಶ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಯೆನೆಪೊಯ ವಿದ್ಯಾಸಂಸ್ಥೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News