ಸೋಮೇಶ್ವರ, ಬಟ್ಟಂಪಾಡಿಯಲ್ಲಿ ತೀವ್ರಗೊಂಡ ಕಡಲ್ಕೊರೆತ; ರಸ್ತೆಯೂ ಸಮುದ್ರಪಾಲು

Update: 2022-06-24 12:05 GMT

ಉಳ್ಳಾಲ: ಕಳೆದೆರಡು ದಿವಸಗಳಿಂದ ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸೋಮೇಶ್ವರ, ಉಚ್ಚಿಲದ ಬಟ್ಟಂಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಕಳೆದ ವರ್ಷ ಭಾಗಶ: ಅಳಿದುಹೋಗಿ ಉಳಿದಿದ್ದ ರಸ್ತೆಯು ಸಮುದ್ರ ಪಾಲಾಗಿದೆ.

ಸೋಮೇಶ್ವರ, ಉಚ್ಚಿಲ ಪ್ರದೇಶಗಳು ಕಳೆದ ಐದು ವರುಷಗಳಿಂದಲೂ ಕಡಲ್ಕೊರೆತ ಸಮಸ್ಯೆಯಿಂದ ನಲುಗುತ್ತಿದೆ. ಈ ಪ್ರದೇಶದಲ್ಲಿ ನಡೆದ ಅವೈಜ್ಞಾನಿಕ ಬ್ರೇಕ್ ವಾಟರ್ ಕಾಮಗಾರಿಯು ಯಾವುದೇ ಪರಿಣಾಮ ಬೀರಿಲ್ಲ. ಇದೀಗ ರಸ್ತೆ ಸಮುದ್ರ ಪಾಲಾಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಬಂದರು ಸಚಿವ ಎಸ್.ಅಂಗಾರ ಅವರು ಇಲ್ಲಿಗೆ ಭೇಟಿ ನೀಡಿ ಕಾಸರಗೋಡಿನ ನೆಲ್ಲಿ ಕುನ್ನು ಮಾದರಿಯ ಸೀ ಬ್ರೇಕ್ ವಾಟರ್ ಕಾಮಗಾರಿಯನ್ನ ಇಲ್ಲೂ ನಡೆಸುವ ಬಗ್ಗೆ ಅಧ್ಯಯನ ಮತ್ತು ಸ್ಥಳ ಪರಿಶೀಲನೆ ನಡೆಸಿದ್ದರು.

ಸರಕಾರವು ವ್ಯರ್ಥ ಯೋಜನೆಗಳಿಗೆ ಹಣ ಖರ್ಚು ಮಾಡುವ ಬದಲು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News