ಗುಂಪಕಲ್ಲು ‘ಝುಲ್ಫಿಕರ್ ಫ್ರೆಂಡ್ಸ್’ನಿಂದ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

Update: 2022-06-24 13:03 GMT

ಬಂಟ್ವಾಳ, ಜೂ.24: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುಂಪಕಲ್ಲು ಝುಲ್ಫಿಕರ್ ಫ್ರೆಂಡ್ಸ್ ಇದರ ವತಿಯಿಂದ ಸನ್ಮಾನಿಸಲಾಯಿತು.

ಗುರುವಾರ ಗುಂಪಕಲ್ಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ವಗ್ಗ ಇಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಮುಹಮ್ಮದ್ ರಫಾಝ್ ಜಿ.ಎ., ಮುಹಮ್ಮದ್ ರಾಯಿಝ್ ಜಿ.ಎ., ಸೆಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಶಮೀಮಾ ಇವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ತೌಹೀದ್ ಆಂಗ್ಲಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಫಾತಿಮಾ ಸನಾ ಅವರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಗ್ಗ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶೇಖ್ ಆದಮ್ ಸಾಹೇಬ್, ಶಿಕ್ಷಕ ಹಾರೀಸ್, ಅಬೂಬಕರ್ ಮದ್ದ, ಶರಫುದ್ದೀನ್, ಝುಲ್ಫಿಕರ್ ಫ್ರೆಂಡ್ಸ್ ಸಮಿತಿಯ ಸದಸ್ಯರು, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News