ಉಡುಪಿ: ಡಿಜಿ ಪೇ ಸಖಿಯರಿಗೆ ಒಂದು ದಿನದ ಕಾರ್ಯಾಗಾರ

Update: 2022-06-24 14:58 GMT

ಉಡುಪಿ: ಡಿಜಿ ಪೇ ಸಖಿಯರ ಒಂದು ದಿನದ ಕಾರ್ಯಾಗಾರ ಇತ್ತೀಚೆಗೆ ಮಣಿಪಾಲದ ಜಿಲ್ಲಾ ಪಂಚಾಯತ್‌ನ ಮಾನವ ಸಂಪನ್ಮೂಲ ಸಭಾಂಗಣದಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ೩೦ಕ್ಕೂ ಅಧಿಕ ಸಂಖ್ಯೆಯಲ್ಲಿ ಡಿಜಿಪೇ ಸಖಿಯರು ಭಾಗವಹಿಸಿ, ಡಿಜಿಪೇ ಮೂಲಕ ಹಣಕಾಸಿನ ವಹಿವಾಟು ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳಾದ ಟೆಲಿ-ಲಾ, ಜೀವ ವಿಮೆ, ಮೋಟಾರ್ ವಿಮೆ, ಬಸ್‌ಟಿಕೆಟ್, ವಿಮಾನ ಟಿಕೆಟ್, ಹೋಟೆಲ್ ರೂಂ ಬುಕ್ಕಿಂಗ್, ಸಿಎಸ್‌ಸಿ ಗ್ರಾಮೀಣ ಮ್ಯಾಟ್ರಿಮೋನಿ, ಶಿಕ್ಷಣ ಇಲಾಖೆ ಸೇವೆಗಳು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ  ಪಡೆದರು.

ಎಪ್ರಿಲ್, ಮೇ ತಿಂಗಳಲ್ಲಿ ಅತಿ ಹೆಚ್ಚು ವಹಿವಾಟು ನಡೆಸಿದ ಡಿಜಿಪೇ ಸಖಿಯರಿಗೆ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮೆಚ್ಚುಗೆ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟು ನಡೆಸುವಂತೆ ತಿಳಿಸಿದರು.

ಯೋಜನೆಗಳ ಕುರಿತು ಸಿಎಸ್‌ಸಿ ರಾಜ್ಯ ಮಟ್ಟದ ವ್ಯವಸ್ಥಾಪಕ ಶಿವಶೇಖರ ಗೌಡ ಪಾಟೀಲ್ ಹಾಗೂ ಜಿಲ್ಲಾ ವ್ಯವಸ್ಥಾಪಕ ನಿತೀಶ್ ಶೆಟ್ಟಿಗಾರ್ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಜಿಪಂನ ಯೋಜನಾ ನಿರ್ದೇಶಕ ಬಾಬು ಎಮ್, ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್, ಏಕ ವ್ಯಕ್ತಿ ಸಮಾಲೋಚಕ ಪಾಂಡುರಂಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News