ಎನ್ಐಟಿಕೆ ಟೋಲ್ ಗೇಟ್ ಬಿಡ್ ಗೆ ಗುತ್ತಿಗೆದಾರರ ನಿರಾಸಕ್ತಿ

Update: 2022-06-25 16:39 GMT

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಬಿಡ್ ಕರೆಯುವ ದಿನಾಂಕ ಮುಕ್ತಾಯಗೊಂಡಿದ್ದರೂ, ಯಾವುದೇ ಹೊಸ ಬಿಡ್‌ದಾರರು ಟೋಲ್ ಗೇಟ್ ನಿರ್ವಹಿಸಲು ಆಸಕ್ತಿ ತೋರುತ್ತಿಲ್ಲ ಎಂದು ತಿಳಿದು ಬಂದಿದೆ.

ಈಗಾಗಲೇ ಟೋಲ್ ಗೇಟ್ ತೆರವಿಗೆ ನಡೆಯುತ್ತಿರುವ ಹೋರಾಟಗಳು, ಕೇಂದ್ರ ಹೆದ್ದಾರಿ ಸಚಿವರು ಮಾಹಿತಿ ನೀಡಿರುವಂತೆ 60 ಕಿ.ಮೀ. ಅಂತರದಲ್ಲಿರುವ  ಟೋಲ್ ಗೇಟ್ ಗಳ ವಿಸರ್ಜನೆ ಹಾಗೂ ಸುಂಕ ವಸೂಲಿಯ ಗುರಿ ಹೆಚ್ವಿಸಿರುವುದೂ ಗುತ್ತಿಗೆದಾರರ ನಿರಾಸಕ್ತಿಗೆ ಕಾರಣ ಎನ್ನಲಾಗಿದೆ.

ಎನ್ಐಟಿಕೆ ಕೋಲ್ಗೇಟ್ ಗೆ ಬಿಡ್ ಕರೆಯುವ ಪ್ರಕ್ರಿಯೆ ಜೂನ್ 23ರಂದು ಕೊನೆ ಗೊಂಡಿರುತ್ತದೆ. ಈ ನೆಲೆಯಲ್ಲಿ ಹೊಸ ಗುತ್ತಿಗೆದಾರರ ಹುಡುಗಾಟದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ತೊಡಗಿದೆ. ಆದರೆ ಯಾವುದೇ ಗುತ್ತಿಗೆದಾರರು ಎನ್ಐಟಿಕೆ ಟೋಲ್ ಗೇಟ್ ಅನ್ನು ಗುತ್ತಿಗೆ ಪಡೆಯಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ.
ಸುಂಕ ವಸೂಲಾತಿಗೆ 48.57 ಕೋಟಿ ರೂ. ಗುರಿ ನಿಗದಿ ಪಡಿಸಲಾಗಿದ್ದು, ಕಳೆದ ಬಾರಿ 54 ಕೋ.ರೂ. ವಸೂಲಿ ಮಾಡುವ ಗುರಿ ಇತ್ತು. ಈ ಬಾರಿ 50 ಕೋ.ರೂ. ನಿಗದಿ ಮಡಿದರೂ ಗುತ್ತಿಗೆ ದಾರರು ಗುತ್ತಿಗೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೋಲ್ ಗೇಟ್ ನ ಮೂಲಗಳು ಮಾಹಿತಿ ನೀಡಿದೆ.

ರಾ.ಹೆ.ಪ್ರಾಧಿಕಾರಕ್ಕೆ ಮುಳುವಾದ ಟೋಲ್ ಗೇಟ್ ತೆರವಿನ ಹೋರಾಟ

ಈಗಾಗಲೇ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಸಂಬಂಧಿಸಿ ಬಿಡ್ ಪ್ರಕ್ರಿಯೆ ಜೂನ್ 23ಕ್ಕೆ ಕೊನೆ ಗೊಂಡಿರುತ್ತದೆ. ಆದರೆ ಈವರೆಗೂ ಬಿಡದವರು ಟೋಲ್ ಗಟ್ ಗುತ್ತಿಗೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಇದಕ್ಕೆ ಟೋಲ್ಗೇಟ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಈಗಾಗಲೇ ಶಾಸಕರು, ಸಂಸದರು ಹಾಗೂ ಹೋರಾಟಗಾರರ ಮಧ್ಯೆ ಆರೋಪ-ಪ್ರತ್ಯಾರೋಪಗಳ ಸರಣಿ ನಡೆಯುತ್ತಿದ್ದು ಹೋರಾಟಗಾರರು ಪಟ್ಟು ಸಡಿಲಿಸುವ ಲಕ್ಷಣಗಳು ಇಲ್ಲದಿರುವುದರಿಂದಲೇ ಎನ್ಐಟಿಕೆ ಟೋಲ್ಗೇಟ್ ಗುತ್ತಿಗೆ ಪಡೆಯಲು ಬಿಡ್ ದಾರರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೋರಾಟಕ್ಕೆ ಶಾಸಕರ ಬೆಂಬಲ

ಒಂದು ಮೂಲಗಳ ಪ್ರಕಾರ ಇತ್ತೀಚೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಭರತ್ ಶೆಟ್ಟಿ ಅವರು ಸುದ್ದಿಗೋಷ್ಠಿಯೊಂದರಲ್ಲಿ ಟೋಲ್ಗೇಟ್ ತೆರವಿಗೆ ನನ್ನ ಸಹಮತವಿದೆ. ನಾನು ಟೋಲ್ ಗೇಟ್ ತೆರವಿನ ಹೋರಾಟಗಳಲ್ಲಿ ಭಾಗವಹಿಸುವುದಾಗಿ ಹೇಳಿಕೆಯನ್ನು ನೀಡಿದ್ದರು. ಈ ಕಾರಣದಿಂದಲೂ ಗುತ್ತಿಗೆದಾರರು ಬಿಡ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಿಡ್ ದಾರರ ನಿರಾಸಕ್ತಿಗೆ ಕೇಂದ್ರ ಸಾರಿಗೆ ಸಚಿವರ‌ ಹೇಳಿಕೆಯೂ ಕಾರಣ?

ಒಂದೆಡೆ ಎನ್ಐಟಿಕೆ ಟೋಲ್ಗೇಟ್ ಗುತ್ತಿಗೆದಾರರು ನಿರಾಸಕ್ತಿ ತೋರುತ್ತಿರುವ ಅಂತೆಯೇ ದೇಶದ ಹಲವೆಡೆಯ ಟೋಲ್ ಗೇಟ್ ಗಳಿಗೂ ಇದೇ ಪರಿಸ್ಥಿತಿ ಬಂದರಿಗೆ ಇದೆ ಎನ್ನಲಾಗಿದೆ.

ಒಡಿಶಾದ ದುಲಾರ್ ಪುರ್, ಆಂಧ್ರದ ಬಸಪುರಮ್‌, ತಮಿಳು ನಾಡಿನ ನಗರ್ ಟೋಲ್‌ಗೂ ಬಿಡ್‌ ದಾರರು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಟೋಲ್ ಗೇಟ್ ನ ಮೂಲಗಳು ಮಾಹಿತಿ ನೀಡಿದ್ದು ಇದಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ನೀಡಿದ್ದ 60 ಕಿಲೋಮೀಟರ್ ವ್ಯಾಪ್ತಿಯ ಒಳಗೆ ಎರಡು ಟೋಲ್ ಗೇಟ್ ಇದ್ದರೆ ಅವುಗಳನ್ನು ತೆರವುಗೊಳಿಸುವುದಾಗಿ ನೀಡಿದ್ದ ಹೇಳಿಕೆಯೂ ಕಾರಣ ಎಂದು ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News