ಇಸ್ರೇಲ್ ಪಡೆಯ ಗುಂಡೇಟಿಗೆ ಪೆಲೆಸ್ತೀನ್ ಯುವಕ ಮೃತ್ಯು

Update: 2022-06-25 17:10 GMT

ಜೆರುಸಲೇಂ, ಜೂ.25: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಯೋಧರ ಗುಂಡಿನ ದಾಳಿಯಲ್ಲಿ ಪೆಲೆಸ್ತೀನ್ನ 16 ವರ್ಷದ ಯುವಕ ಮೃತಪಟ್ಟಿರುವುದಾಗಿ ಪೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. ರಮಲ್ಲಾದ ಈಶಾನ್ಯದಲ್ಲಿರುವ ಸಿಲ್ವಾಡ್ ನಗರದಲ್ಲಿ ಇಸ್ರೇಲ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡ ಮುಹಮ್ಮದ್ ಹಮೀದ್ ಎಂಬ ಯುವಕನನ್ನು ಇಸ್ರೇಲ್ ಪಡೆ ತನ್ನ ವಶಕ್ಕೆ ಪಡೆದುಕೊಂಡಿತ್ತು. ಆತ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಮೃತದೇಹವನ್ನು ಸೇನೆ ಹಸ್ತಾಂತರಿಸುವ ನಿರೀಕ್ಷೆಯಿದೆ ಎಂದು ಪೆಲೆಸ್ತೀನ್ ಮಾಧ್ಯಮ ವರದಿ ಮಾಡಿದೆ. ಹಮೀದ್ನ ಮೇಲೆ ಇಸ್ರೇಲ್ ಪಡೆ ನಡೆಸಿದ ಗುಂಡಿನ ದಾಳಿ ಮತ್ತು ಹತ್ಯೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ ಎಂದು ನಗರದ ಮೇಯರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News