ಉಕ್ರೇನ್‍ನ ಪ್ರಮುಖ ನಗರ ವಶಪಡಿಸಿಕೊಂಡ ರಷ್ಯಾ

Update: 2022-06-26 01:46 GMT
(Photo: PTI)

ಕೀವ್: ಹಲವು ವಾರಗಳ ಯುದ್ಧದ ಬಳಿಕ ಸೆವೆರೊಡೊನೆಸ್ಕ್ ನಗರವನ್ನು ವಶಪಡಿಸಿಕೊಂಡಿದೆ ಎಂದು ಉಕ್ರೇನ್‍ನ ಈ ಪ್ರಮುಖ ನಗರದ ಮೇಯರ್ ಪ್ರಕಟಿಸಿದ್ದಾರೆ.

ಅಣ್ವಸ್ತ್ರಶಕ್ತ ಕ್ಷಿಪಣಿಗಳನ್ನು ಬೆಲರಸ್‍ಗೆ ಕೆಲವೇ ತಿಂಗಳುಗಳಲ್ಲಿ ಕಳುಹಿಸಲು ಮಾಸ್ಕೊಗೆ ಸಾಧ್ಯವಾಗಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಯುದ್ಧಪೀಡಿತ ದೇಶದ ಪೂರ್ವಭಾಗದ ಸಂಪೂರ್ಣ ನಿಯಂತ್ರಣ ಸಾಧಿಸಲು ಈ ಪ್ರಮುಖ ಕೈಗಾರಿಕಾ ನಗರವಾಗಿರುವ ಸೆವೆರೊಡೊನೆಸ್ಕ್ ನಗರವನ್ನು ವಶಪಡಿಸಿಕೊಳ್ಳುವುದು ಮಾಸ್ಕೊಗೆ ನಿರ್ಣಾಯಕವಾಗಿತ್ತು.

ಹಲವು ವಾರಗಳ ಕಾಲ ಯುದ್ಧದ ದೃಶ್ಯ ಕಂಡುಬಂದಿತ್ತು. ಆದರೆ ನೆರೆಯ ಲಿಸಿಚನ್ಸ್ಕ್ ನಗರವನ್ನು ರಕ್ಷಿಸುವ ಸಲುವಾಗಿ ಸೇನೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಉಕ್ರೇನ್ ಸೇನೆ ಶುಕ್ರವಾರ ಪ್ರಕಟಿಸಿದೆ.

"ನಗರವನ್ನು ರಷ್ಯನ್ನರು ಸಂಪೂರ್ಣವಾಗಿ ಅತಿಕ್ರಮಿಸಿಕೊಂಡಿದ್ದಾರೆ" ಎಂದು ಮೇಯರ್ ಅಲೆಕ್ಸಾಂಡರ್ ಸ್ಟ್ರೂಕ್ ಶನಿವಾರ ಪ್ರಕಟಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು ಮಾಸ್ಕೊ ಪರ ಪ್ರತ್ಯೇಕತಾವಾದಿಗಳು ಹೇಳಿಕೆ ನೀಡಿ, ರಷ್ಯನ್ ಸೇನೆ ಮತ್ತು ಅವರ ಮಿತ್ರಕೂಟಗಳು ಸೆವೆರೊಡೊನೆಸ್ಕ್ ನಗರದ ಎದುರು ನದಿಯಾಚೆಗೆ ಇರುವ ಲಿಸಿಚನ್ಸ್ಕ್ ನಗರವನ್ನು ಪ್ರವೇಶಿಸಿದ್ದಾಗಿ ಸ್ಪಷ್ಟಪಡಿಸಿದ್ದರು.

"ಬೀದಿಕಾಳಗ ಇದೀಗ ನಡೆಯುತ್ತಿದೆ" ಎಂದು ಪ್ರತ್ಯೇಕತಾವಾದಿ ಮುಖಂಡ ಆಂಡ್ರಿ ಮೊರೊಕ್ಕೊ ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News