ತೆಂಕನಿಡಿಯೂರು: ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಕ್ರಮ

Update: 2022-06-27 13:46 GMT

ಉಡುಪಿ : ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ನೆಸ್ಸೆಸ್  ವಾರ್ಷಿಕ ವಿಶೇಷ ಶಿಬಿರ ಗರಡಿಮಜಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಪೋಕ್ಸೊ ಕಾಯಿದೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಸಮಾಜ ಕಾರ್ಯ ಉಪನ್ಯಾಸಕಿ ಡಾ. ಪ್ರಮೀಳಾ ವಾಜ್ ಮಾತನಾಡಿ, ದೇಶ ಎಷ್ಟೇ ಅಭಿವೃದ್ಧಿಯ ಪಥದಲ್ಲಿದ್ದರೂ ಲೈಂಗಿಕ ದೌರ್ಬಲ್ಯ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ.  ಈ ಪೈಕಿ ಮಕ್ಕಳ ಮೇಲೂ ಅನೇಕ ಲೈಂಗಿಕ ದೌರ್ಜನ್ಯ ಅಥವಾ ಯಾವುದೋ ರೀತಿಯ ದೌರ್ಜನ್ಯಗಳು ನಡೆದಿರುತ್ತವೆ.  ಅದರಲ್ಲಿ ಬಹುತೇಕ ಪ್ರಕರಣಗಳು ವರದಿಯಾಗುವುದೇ ಇಲ್ಲ ಎಂದರು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಗಮನ ಹರಿಸುವ ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳ ಪೋಷಕರು, ಶಿಕ್ಷಕರು ಸೇರಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ ಎಂದ ಅವರು, ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಸಂತ್ರಸ್ಥರಿಗೆ ನ್ಯಾಯದೊರಕಿಸಿ ಕೊಡಬೇಕಿದೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಶ್ರೀನಿವಾಸ ಶೆಟ್ಟಿ ವಹಿಸಿದ್ದರು.  ಎನ್ನೆಸ್ಸೆಸ್ ಯೋಜ ನಾಧಿಕಾರಿ ಸುಷ್ಮಾ ಟಿ. ಹಾಗೂ ಡಾ. ಮಹೇಶ್ ಕುಮಾರ್ ಕೆ.ಇ. ಉಪಸ್ಥಿತರಿದ್ದರು.  ಶಿಬಿರಾರ್ಥಿ ಸುಜಾತ ಸ್ವಾಗತಿಸಿ, ಸಾವಿತ್ರಿ ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News