ಬಜ್ಪೆ : ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ

Update: 2022-06-27 14:40 GMT

ಮಂಗಳೂರು: ಬಜ್ಪೆ ಪಟ್ಟಣ ಪಂಚಾಯತ್ ಆಗಿ‌ ಮೇಲ್ದರ್ಜೆಗೆ ಏರಿದ ಬಳಿಕ ಕನಿಷ್ಠ ಮೂಲ‌ ಸೌಕರ್ಯಗಳನ್ನು ಜನ ಸಾಮಾನ್ಯರಿಗೆ ನೀಡುವ ಬದಲು ದುಬಾರಿ ಮನೆ ತೆರಿಗೆ, ವಿದ್ಯುತ್ ದರ, ನೀರಿನ ದರ ಹಾಗೂ ಅಂಗಡಿಗಳ ಪರವಾನಿಗೆ ಗೆ 3ರಿಂದ ನಾಲ್ಕು ಪಟ್ಟು ಹೆಚ್ಚು ಪಡೆಯುತ್ತಾ ಜನರನ್ನು ಕತ್ತಲಿನಲ್ಲಿ‌ ಇಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಪಕ್ಷಾತೀತವಾಗಿ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಬಜಪೆ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಿರಾಜ್ ಮಾತನಾಡಿ, ಕಳೆದ ಏಪ್ರಿಲ್ ತಿಂಗಳಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಅನು ಪಟ್ಟಣ ಪಂಚಾಯತ್ ಆಗಿ ಸರಕಾರ ಘೋಷಿಸಿತ್ತು. ನಾವೆಲ್ಲರೂ ಕೋಟಿಗಟ್ಟಲೆ ಅನುದಾನ ಬರುತ್ತದೆ ಬಜಪೆ ಮಂಗಳೂರು ನಗರದಂತೆ ಅಭಿವೃದ್ಧಿಯಾಗುತ್ತದೆ ಎಂದು ತಿಳಿದುಕೊಂಡಿದ್ದೆವು ಆದರೆ ಅಭಿವೃದ್ಧಿಯ ಕನಸು ಕಂಡಿದ್ದ ಬಜ್ಪೆಯ 18,500 ನಾಗರಿಕರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸುವ ಬದಲು ತೆರಿಗೆ ಹೆಸರಿನಲ್ಲಿ ಪಟ್ಟಣ ಪಂಚಾಯತ್ ಗಳಿಗೆ ಮಾಡುತ್ತಿದೆ ಎಂದು ಆರೋಪಿಸಿದರು.

ಪಟ್ಟಣ ಪಂಚಾಯತ್ ಘೋಷಣೆಯಾದ ಬಳಿಕ ಮನೆ ತೆರಿಗೆ ಮೂರು ಪಟ್ಟು ಹೆಚ್ಚಿಸಲಾಗಿದೆ. ವಿದ್ಯುತ್ ಬಿಲ್ಲನ್ನು ದುಪಟ್ಟ ಮಾಡಲಾಗಿದೆ. ಅಂಗಡಿಗಳ ಪರವಾನಿಗೆ 500 ಶುಲ್ಕ ರೂ.ಯಿಂದ 2000 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಜನರು ರೋಸಿ ಹೋಗಿದ್ದಾರೆ ಎಂದರು.

ಬಳಿಕ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಮಿತಿ ಸದಸ್ಯ ದೇವದಾಸ್, ಮಳವೂರು ಕೆಂಜಾರು ಬಜ್ಪೆ ಈ ಮೂರು ಪಂಚಾಯತಿಗಳನ್ನು ಸೇರಿಸಿಕೊಂಡು ಪಟ್ಟಣ ಪಂಚಾಯತ ಗ್ರಾಮಪಂಚಾಯತ್ ಅನುಸರಸಲಾಗಿತ್ತು
ಅಭಿವೃದ್ಧಿ ಮತ್ತು ತೆರಿಗೆ ಕಡಿಮೆಯಾಗಬಹುದೆಂದು ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದೆವು ಆದರೆ ಇದಕ್ಕೆ ತದ್ವಿರುದ್ಧ ವಾಗಿ ಪಟ್ಟಣ ಪಂಚಾಯತ್ ಆಡಳಿತ ನಡೆಸುತ್ತಿದೆ.

ಬಜಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಬಳಿಕ ಇಲ್ಲಿ ಆಡಳಿತ ಸಮಿತಿಯ ರಚನೆಯಾಗಿಲ್ಲ ಆದ್ದರಿಂದ ಇಲ್ಲಿ ಶೀಘ್ರ ಆಡಳಿತ ಸಮಿತಿಯ ರಚನೆಯಾಗಬೇಕಿದೆ. ಆ ಮೂಲಕ ಅಧಿಕಾರಿಗಳು ಮಾಡುತ್ತಿರುವ ತೆರಿಗೆ ಹೆಚ್ಚಳ ಸಹಿತ ಇತರ ಹೆಚ್ಚುವರಿ ಸುಳ್ಳುಗಳಿಂದ ಜನಸಾಮಾನ್ಯರಿಗೆ ಮುಕ್ತಿ ದೊರೆಯಲಿದೆ. ಇಂದು ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಿ ಅಧಿಕಾರಿ ವರ್ಗವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಕಾನೂನು ಬದ್ಧ ರೀತಿಯಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಕರ್ನಾಟಕ ದಸಂಶದ ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು ಎಚ್ಚರಿಕೆ ನೀಡಿದರು.

"ಬಜ್ಪೆ ಯನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ ಆದರೂ ಗ್ರಾಮಸ್ಥರಿಗೆ ಯಾವುದೇ ಸೇವೆಗಳು ಲಭ್ಯವಾಗುತ್ತಿಲ್ಲ ಇಲ್ಲಿನ ಆರೋಗ್ಯಕೇಂದ್ರ ಸಂಜೆ 5 ಗಂಟೆಗೆ ಬಾಗಿಲು ಮುಚ್ಚಿ ಕೊಳ್ಳುತ್ತಿದೆ ಕೂಡ ಐದು ಗಂಟೆಗೆ ಬಂದು ಮಾಡಲಾಗುತ್ತಿದೆ 24 ಗಂಟೆ ಸೇವೆ ನೀಡಬೇಕಿದ್ದ ಸಾರ್ವಜನಿಕ ಇಲಾಖೆಗಳು ಜನರಿಗೆ ಸ್ಪಂದಿಸುತ್ತಿಲ್ಲ".
-ಸಿರಾಜ್
ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ

"ಬಜ್ಪೆ ಪಟ್ಟಣ ಪಂಚಾಯತ್‌  ಆಗಿಯೇ ಮುಂದುವರಿಸುವುದಾದರೆ ಅದಕ್ಕೆ ಪೂರಕವಾದ ಅಭಿವೃದ್ಧಿಗಳ ಜೊತೆಗೆ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ತೆರಿಗೆ ಸಂಗ್ರಹಕ್ಕಾಗಿ ಬಜ್ಪೆ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿದ್ದರೆ, ಅಂತಹ ಪಟ್ಟಣ ಪಂಚಾಯತ್ ನಮಗೆ ಅಗತ್ಯವಿಲ್ಲ. ನಮಗೆ ಗ್ರಾಮ ಪಂಚಾಯತ್ ಮಾತ್ರವೇ ಸಾಕು. ಇದು‌ ಸರಕಾರ ನಾಗರಿಕರಿಗೆ ಸರಕಾರ ಮಾಡುತ್ತಿರುವ ದ್ರೋಹ. ಈ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈಗಿರುವ ಪಟ್ಟಣ ಪಂಚಾಯಿತಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ಡಿಪಿಐ ಮುಖಂಡ ಅಬೂಬಕ್ಕರ್ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.

"ಈ ಪ್ರದೇಶದಲ್ಲಿ ಎಲ್ಲರೂ ಬಡವರಾಗಿದ್ದಾರೆ. ಗ್ರಾಮ ಪಂಚಾಯತನ್ನು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸಿರುವುದರಿಂದ ಬಲಿಪಶುಗಳಾಗುತ್ತಿರುವುದು ಇಲ್ಲಿನ ಕೂಲಿ ಕಾರ್ಮಿಕರು, ಹಿಂದುಳಿದ ವರ್ಗ ಮತ್ತು ದಲಿತರು.

ರಘು ಕೆ. ಎಕ್ಕಾರು
ಕರ್ನಾಟಕ ದಸಂಸ ಜಿಲ್ಲಾ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News