ಜು.1ರಿಂದ ಕಾರವಾರ-ಬೆಂಗಳೂರು ಸಿಟಿ ಜಂಕ್ಷನ್ ಪಂಚಗಂಗಾ ಎಕ್ಸ್‌ಪ್ರೆಸ್‌ನ ಸಮಯ ಬದಲಾವಣೆ

Update: 2022-06-27 16:06 GMT
ಸಾಂದರ್ಭಿಕ ಚಿತ್ರ

ಉಡುಪಿ : ರೈಲು ನಂ.೧೬೫೯೬ ಕಾರವಾರ- ಕೆಆರ್‌ಎಸ್ ಬೆಂಗಳೂರು ಸಿಟಿ ಜಂಕ್ಷನ್ ಪಂಚಗಂಗಾ ದೈನಂದಿನ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಜು.1ರಿಂದ ಬದಲಾವಣೆ ಮಾಡಲಾಗಿದೆ. ಇದರಿಂದ ರೈಲು ಸುಮಾರು 45 ನಿಮಿಷ ಬೇಗನೆ ಬೆಂಗಳೂರು ತಲುಪಲಿದೆ.

ಈ ರೈಲು ಈಗಿನ ಸಮಯದಂತೆ ಸಂಜೆ 6 ಗಂಟೆಗೆ ಕಾರವಾರದಿಂದ ನಿರ್ಗಮಿಸಲಿದೆ. ಕಾರವಾರದಿಂದ ಸಕಲೇಶಪುರದವರೆಗಿನ ಪ್ರಯಾಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇಂದಿನ ಸಮಯದಂತೆ ಅದು ಪ್ರತಿ ನಿಲ್ದಾಣವನ್ನು ತಲುಪಿ ನಿರ್ಗಮಿಸಲಿದೆ.

ಆದರೆ ಜು.1ರಿಂದ ಹಾಸನ ನಿಲ್ದಾಣವನ್ನು ಐದು ನಿಮಿಷ ಮುಂಚಿತವಾಗಿ ಬೆಳಗಿನ ಜಾವ 3.50ಕ್ಕೆ ತಲುಪಿ 3.52ಕ್ಕೆ ಅಲ್ಲಿಂದ ನಿರ್ಗಮಿಸಲಿದೆ. ಚೆನ್ನರಾಯಪಟ್ಟಣವನ್ನು 21 ನಿಮಿಷ ಬೇಗನೆ ಬೆಳಗಿನ ಜಾವ 4.18ಕ್ಕೆ ತಲುಪಿ 4.19ಕ್ಕೆ ನಿರ್ಗಮಿಸಲಿದೆ. ಕುಣಿಗಲ್ ನಿಲ್ದಾಣವನ್ನು 20 ನಿಮಿಷ ಬೇಗ 5.15ಕ್ಕೆ ತಲುಪಿ 5.16ಕ್ಕೆ ನಿರ್ಗಮಿಸಲಿದೆ.

ಯಶವಂತಪುರ ನಿಲ್ದಾಣವನ್ನು ಇಂದಿನ 7.26ಕ್ಕೆ ಬದಲು 6.43ಕ್ಕೆ ತಲುಪಿ 6.45ಕ್ಕೆ ಅಲ್ಲಿಂದ ನಿರ್ಗಮಿಸಲಿದೆ. ಪಂಚಗಂಗಾ ರೈಲು ಬೆಳಗ್ಗೆ 7.15ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ ತಲುಪಲಿದೆ. ಈಗ ಅದು ಬೆಳಗ್ಗೆ 8ಕ್ಕೆ ತಲುಪುತ್ತಿದೆ. ನೈರುತ್ಯ ರೈಲ್ವೆ ಸಮಯದಲ್ಲಿ ಈ ಬದಲಾವಣೆಯನ್ನು ಮಾಡಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News