ಕೊಡಗು-ದಕ್ಷಿಣ ಕನ್ನಡ ಭಾಗದಲ್ಲಿ ಸಂಜೆಯ ವೇಳೆಗೆ ಮತ್ತೆ ಭೂಮಿ ಕಂಪಿಸಿದ ಅನುಭವ

Update: 2022-06-28 12:51 GMT

ಸುಳ್ಯ: ಕೊಡಗು-ದಕ್ಷಿಣ ಕನ್ನಡದ ಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಸಾರ್ವಜನಿಕರು ಹೇಳಿಕೊಂಡಿದ್ದಾರೆ. ಸಂಜೆ 4.40ರ ವೇಳೆಗೆ ಮತ್ತೆ ಲಘು ಕಂಪನ ಉಂಟಾಗಿದ್ದು ವಿಚಿತ್ರ ಶಬ್ದ ಕೇಳಿದೆ ಎಂದು ಸಂಪಾಜೆ ಮತ್ತು ಗಡಿ ಗ್ರಾಮಗಳ ಸಾರ್ವಜನಿಕರು ಅನುಭವ ಹಂಚಿಕೊಳ್ಳುತ್ತಿದ್ದಾರೆ.

ಶಬ್ದದೊಂದಿಗೆ ಲಘು ಕಂಪನದ ಅನುಭವ ಆಗಿದೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ. ವಿವಿಧ ಭಾಗಗಳಲ್ಲಿ ಶಬ್ದ ಕೇಳಿದ ಹಾಗು ಲಘು ಕಂಪನದ ಅನುಭವ ಆಗಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅನುಭವ ಹಂಚಿಕೊಳ್ಳುತ್ತಿದ್ದಾರೆ.

ಬೆಳಗ್ಗೆ ಆದ ಕಂಪನ ಬಹುತೇಕರಿಗೆ ಅನುಭವ ಆಗಿದೆ. ಸಂಜೆಯ ಕಂಪನ ಹೆಚ್ಚಿನ‌ ಮಂದಿಗೆ ಅನುಭವಕ್ಕೆ ಬಂದಿಲ್ಲ.‌ ಬೆಳಿಗ್ಗೆ ಚೆಂಬು ಕೇಂದ್ರವಾಗಿ‌ ರಿಕ್ಟರ್ ಸ್ಕೇಲ್‌ನಲ್ಲಿ 3.0 ದಾಖಲಿಸಿದ ಕಂಪನ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News