ಕಲ್ಲಡ್ಕ: ವಿನ್ಯಾಸ ಟೈಲರಿಂಗ್ ಸೆಂಟರ್ ಶುಭಾರಂಭ

Update: 2022-06-29 07:24 GMT

ಕಲ್ಲಡ್ಕ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಆಯಿಷಾ ಇಬ್ರಾಹಿಮ್ ಮಸ್ಜಿದ್ ಕೆ.ಸಿ.ರೋಡ್ ಕಲ್ಲಡ್ಕ ಇದರ ಸಹಯೋಗದೊಂದಿಗೆ ವಿನ್ಯಾಸ ಟೈಲರಿಂಗ್ 21ನೇ ಸೆಂಟರ್ ಉದ್ಘಾಟನಾ ಸಮಾರಂಭವು ಆಯಿಷಾ ಇಬ್ರಾಹಿಮ್ ಮಸ್ಜಿದ್ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಐಡಾಸುರೇಶ್ ಉದ್ಘಾಟಿಸಿದರು. ಸರ್ಫುನ್ನಿಸಾ ಸಾಂಧರ್ಬಿಕವಾಗಿ ಮಾತನಾಡಿದರು.

ಆಯಿಷಾ (ಮಾಜಿ ಸದಸ್ಯರು ಗೊಲ್ತಮಜಲು ಗ್ರಾಮ ಪಂಚಾಯತ್) ಸಮಾಜ ಸೇವೆಯಲ್ಲಿ ನಮ್ಮನ್ನು ತೊಡಗಿಸಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಖೈರುನ್ನೀಸ ಸಯ್ಯದ್, ಶರಫುನ್ನೀಸ ಕಂಕನಾಡಿ, ಮುಮ್ತಾಝ್ ಹಕೀಮ್ ಸಾಂದರ್ಭೋಚಿತವಾಗಿ ಮಾತನಾಡಿದರು.

ಆತಿಕಾ ರಫೀಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ವಿಮೆನ್ಸ್ ಫೌಂಡೇಶನ್ ಇದರ ನಿರ್ದೇಶಕರಾದ ಮರ್ಯಮ್ ಶಬೀನ ಪುತ್ತಿಗೆ ವಹಿಸಿದ್ದರು. ಝೊಹರಾ ಉಳ್ಳಾಲ ವಂದಿಸಿದರು. ಮುಮ್ತಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News