ಉದಯಪುರ ಹತ್ಯೆ: ಮುಸ್ಲಿಮ್ ಒಕ್ಕೂಟ ಸಹಿತ ಹಲವರ ಖಂಡನೆ

Update: 2022-06-29 13:25 GMT

ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ವ್ಯಕ್ತಿಯ ಹತ್ಯೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಈ ಹತ್ಯೆ ಇಸ್ಲಾಂ ಧರ್ಮ ಹಾಗೂ ದೇಶದ ಕಾನೂನಿಗೆ ವಿರುದ್ಧವಾಗಿದೆ. ಯಾವುದೇ ದೃಷಿಕೋನದಿಂದಲೂ ಇಂತಹ ಅನಾಗರಿಕ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಈ ಕುರಿತು ಅತಿ ಶೀಘ್ರವಾಗಿ ಎಲ್ಲಾ ಮಗ್ಗಲುಗಳಿಂದಲೂ ತನಿಖೆ ನಡೆಸಿ ತಪ್ಪಿತಸ್ತರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೋಟ ಇಬ್ರಾಹಿಮ್ ಸಾಹೇಬ್ ಒತ್ತಾಯಿಸಿದ್ದಾರೆ.

ಉಡುಪಿ ಸಹಬಾಳ್ವೆ: ನೂಪುರ್ ಶರ್ಮಾರವರನ್ನು ಬೆಂಬಲಿಸಿದ್ದಕ್ಕೆ ಉದಯ ಪುರದಲ್ಲಿ ಮಾಡಿರುವ ವ್ಯಕ್ತಿಯ ಬರ್ಬರ ಹತ್ಯೆ ಖಂಡನೀಯ. ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ. ಮಾಡಿದ ತಪ್ಪಿಗೆ ಅದರ ಘೋರತೆಗೆ ಅನು ಗುಣವಾಗಿ ನ್ಯಾಯಾಲಯ ಶಿಕ್ಷೆ ನೀಡಬೇಕು. ಇಂತಹ ಕೃತ್ಯ ಮಾಡಿದವರನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳ ಬೇಕು ಹಾಗೂ ಇಂತಹ ಕೃತ್ಯಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು ಎಂದು ಉಡುಪಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.

ವರೋನಿಕಾ ಕರ್ನೆಲಿಯೋ: ರಾಜಸ್ಥಾನದ ಉದಯಪುರದಲ್ಲಿ ವ್ಯಕ್ತಿಯೊಬ್ಬರ ಬರ್ಬರ ಹತ್ಯೆಯಾಗಿರುವುದು ಅಮಾನವೀಯ ಹಾಗೂ ಕ್ರೂರತೆಯ ಪರಮಾವಧಿಯಾಗಿದ್ದು ನಾಗರಿಕ ಸಮಾಜ ಇಂತಹ ವರ್ತನೆಯನ್ನು ಸಹಿಸ ಲಾಗದು ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ ಖಂಡಿಸಿದ್ದಾರೆ.

ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಯಾವುದೇ ಸಮುದಾಯ ಮಾಡಿದ್ದರೂ ಕೂಡ ಸಹಿಸಲು ಸಾಧ್ಯವಿಲ್ಲ. ಉದಯಪುರದ  ಹತ್ಯೆಯನ್ನು ’ಭಯಾನಕ ಮತ್ತು ಭೀಕರ’ ಆಗಿದ್ದು ಈ ಕ್ರೌರ್ಯದಿಂದ ಭಯೋತ್ಪಾ ದನೆಯನ್ನು ಹರಡುವವರಿಗೆ ತಕ್ಷಣ ಶಿಕ್ಷೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ

ಶಬ್ಬೀರ್ ಅಹಮದ್: ಯಾವುದೇ ಧರ್ಮವು ಮಾನವೀಯತೆಯ ವಿರುದ್ಧ ಹಿಂಸೆಯನ್ನು ಉತ್ತೇಜಿಸುವದಿಲ್ಲ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರ್ದೌಜನ್ಯವನ್ನು ಯಾವುದೇ ಸಮುದಾಯ ಮಾಡಿದ್ದರೂ ಕೂಡ ಸಹಿಸಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News