ಬಿಐಟಿ ಪ್ರಾಂಶುಪಾಲ ಡಾ. ಮಂಜುರ್ ಬಾಷಾ ವಿಟಿಯು ಅಕಾಡಮಿಕ್ ಸೆನೆಟ್‌ಗೆ ಸದಸ್ಯರಾಗಿ ನಾಮನಿರ್ದೇಶನ

Update: 2022-06-29 15:17 GMT

ಮಂಗಳೂರು: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಎಸ್. ಐ. ಮಂಜುರ್ ಬಾಷಾ ಅವರನ್ನು ಕರ್ನಾಟಕದ ರಾಜ್ಯಪಾಲರು ಮತ್ತು ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಕಾಡಮಿಕ್ ಸೆನೆಟ್‌ಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ. ಇದು ಬೆಳಗಾವಿ ವಿಟಿಯುನ 8ನೇ ಶೈಕ್ಷಣಿಕ ಸೆನೆಟ್ ಆಗಿದೆ.

ಡಾ. ಎಸ್. ಐ. ಮಂಜುರ್ ಬಾಷಾ ಅವರನ್ನು ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‌ಗಳ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಸಿಬ್ಬಂದಿ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News