ಪಿಲಿಪ್ಪೀನ್ಸ್: ಸುದ್ಧಿ ವೆಬ್ಸೈಟ್ ಸ್ಥಗಿತಕ್ಕೆ ಆದೇಶ

Update: 2022-06-29 18:03 GMT

ಮನಿಲಾ, ಜೂ.29: ನೊಬೆಲ್ ಶಾಂತಿ ಪುರಸ್ಕಾರ ವಿಜೇತೆ ಮರಿಯಾ ರೆಸ್ಸಾ ಸಹಸಂಸ್ಥಾಪಕಿಯಾಗಿರುವ ಫಿಲಿಪ್ಪೀನ್ಸ್‌ನ ಸುದ್ಧಿ ವೆಬ್‌ಸೈಟ್ ‘ರ್ಯಾಪ್ಲರ್’ನ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವಂತೆ ಸರಕಾರ ಆದೇಶಿಸಿರುವುದಾಗಿ ಸಂಸ್ಥೆ ಹೇಳಿದೆ. ಗುರುವಾರ ಪದತ್ಯಾಗ ಮಾಡಲಿರುವ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟ್ ಅವರ ಕಟು ಟೀಕಾಕಾರನಾಗಿದ್ದ ರ್ಯಾಪ್ಲರ್ ವಿರುದ್ಧ ಹಲವು ಕ್ರಿಮಿನಲ್ ಆರೋಪ ಹೊರಿಸಲಾಗಿತ್ತು.

 ಸಮೂಹ ಮಾಧ್ಯಮದಲ್ಲಿ ವಿದೇಶಿ ಮಾಲಕತ್ವದ ಮೇಲಿನ ಸಾಂವಿಧಾನಿಕ ಶಾಸನಬದ್ಧ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ರ್ಯಾಪ್ಲರ್‌ನ ಸಂಯೋಜನೆಯ ಪ್ರಮಾಣಪತ್ರವನ್ನು ರದ್ದುಪಡಿಸಲಾಗಿದೆ ಎಂದು ಫಿಲಿಪ್ಪೀನ್ಸ್‌ನ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ ಬುಧವಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. 

ರ್ಯಾಪ್ಲರ್‌ನಲ್ಲಿ ವಿದೇಶಿ ಸಂಸ್ಥೆ ಹೂಡಿಕೆ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರಕಾರದ ಆದೇಶವನ್ನು ‘ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟ್’ ಟೀಕಿಸಿದ್ದು ಮಾಧ್ಯಮದ ವಿರುದ್ಧದ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News