ಮಂಜನಾಡಿ | ಗುಡ್ಡ ಕುಸಿತ: ಅಪಾಯದಲ್ಲಿ ಮನೆ
Update: 2022-06-30 10:54 IST
ಕೊಣಾಜೆ, ಜೂ.30: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸೈ ಕೆಳಗಿನಮನೆ ಎಂಬಲ್ಲಿ ಗುಡ್ಡ ಕುಸಿದ ಪರಿಣಾಮ ಮನೆ ಅಪಾಯಕ್ಕೆ ಸಿಲುಕಿದೆ.
ಇಲ್ಲಿನ ನಿವಾಸಿ ಆರಿಫ್ ಎಂಬವರ ಮನೆಯ ಸಮೀಪದ ಗುಡ್ಡ ಕುಸಿದು ಬಿದ್ದಿದೆ. ಇದರಿಂದ ಮನೆಯೂ ಕುಸಿಯುವ ಅಪಾಯದಲ್ಲಿದ್ದು ಮನೆ ಮಂದಿ ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಇಲ್ಲೇ ಸಮೀಪದ ಇಬ್ರಾಹೀಂ ಎಂಬವರ ಮನೆಗೂ ಇಂದು ಬೆಳಗ್ಗೆ ಸಮೀಪದ ಗುಡ್ಡ ಕುಸಿದು ಮನೆಗೆ ಹಾನಿ ಸಂಭವಿಸಿದೆ.
ಕೊಣಾಜೆ ಗ್ರಾಮದ ತಾಂಡ್ಲಾ ಎಂಬಲ್ಲಿ ರಾಜೇಶ್ ಶೆಟ್ಟಿ ಎಂಬವರ ಕೃಷಿ ಭೂಮಿಗೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ.