ಮುಲ್ಕಿ | ಭಾರೀ ಮಳೆಗೆ ಓರ್ವ ಬಲಿ
Update: 2022-06-30 11:23 IST
ಮುಲ್ಕಿ, ಜೂ. 29: ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವ್ಯಕ್ತಿಯೋರ್ವ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಕೊಲ್ನಾಡು ಕೆ.ಎಸ್.ರಾವ್ ನಗರ ಅಂಬಿಕಾ ಸ್ಟೋರ್ ಬಳಿಯ ಸರಕಾರಿ ಬಾವಿ ಬಳಿ ವರದಿಯಾಗಿದೆ.
ಮೃತಪಟ್ಟವರನ್ನು ಕೆ.ಎಸ್.ರಾವ್ ನಗರ ಪೊಲೀಸ್ ಕ್ವಾರ್ಟರ್ ಸಮೀಪದ ದೈವತ್ ಎಂಬವರ ಪುತ್ರ ಸುನೀಲ್(46) ಎಂದು ತಿಳಿದುಬಂದಿದೆ.
ಘಟನೆ ನಿನ್ನೆ ರಾತ್ರಿ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ದಾರಿಹೋಕರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಮುಲ್ಕಿ ಪೊಲೀಸರು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.