ರಸ್ತೆಗೆ ಕುಸಿದ ದರೆ, ಆವರಣ ಗೋಡೆ: ಮೊಂಟೆಪದವು- ನಡುಪದವು ರಸ್ತೆ ಬಂದ್
Update: 2022-06-30 11:32 IST
ಕೊಣಾಜೆ, ಜೂ.30: ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ಮೊಂಟೆಪದವಿನಿಂದ ನಡುಪದವಿಗೆ ತೆರಳುವ ರಸ್ತೆಯಲ್ಲಿ ಎರಡು ಕಡೆ ದರೆ ಹಾಗೂ ಆವರಣ ಗೋಡೆ ಕುಸಿದು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಮೊಟಕುಗೊಂಡಿರುವುದು ವರದಿಯಾಗಿದೆ.
ಮೊಂಟೆಪದವಿನಿಂದ ನಡುಪದವಿಗೆ ತೆರಳುವ ರಸ್ತೆಯ ಪಟ್ಟೋರಿ ಕ್ರಾಸ್ ಬಳಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ ಹಾಗೂ ಇದೇ ರಸ್ತೆಯ ಮೊಂಟೆಪದವು ಗೌಸಿಯಾ ಮಸೀದಿಯ ಬಳಿಯ ಬೃಹತ್ ಆವರಣ ಗೋಡೆಯೂ ರಸ್ತೆಗೆ ಕುಸಿದು ಬಿದ್ದಿದೆ. ಇದರಿಂದ ಮೊಂಟೆಪದವು ನಡುಪದವು ರಸ್ತೆಯು ಬಂದ್ ಆಗಿದ್ದು, ಈ ಭಾಗದ ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಗುಡ್ಡದ ಮಣ್ಣು ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ.