×
Ad

ಮಂಗಳೂರು- ಪಡೀಲ್ ಜಂಕ್ಷನ್‌ ವಿಭಾಗದ ಹಳಿ ಮೇಲೆ ದರೆ ಕುಸಿತ; ರೈಲು ಸಂಚಾರ ರದ್ದು

Update: 2022-06-30 12:58 IST

ಮಂಗಳೂರು, ಜೂ.30: ಭಾರೀ ಮಳೆಯಿಂದಾಗಿ ಮಂಗಳೂರು- ಪಡೀಲ್ ಜಂಕ್ಷನ್‌ ವಿಭಾಗದ ರೈಲ್ವೆ ಹಳಿ ಮೇಲೆ ಪಕ್ಕದ ದರೆ ಕುಸಿದು ಮಣ್ಣು ಹಳಿ ಮೇಲೆ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚಾರವನ್ನು ಇಂದು ರದ್ದುಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ರೈಲು ನಂ. 06488 ಸುಬ್ರಹ್ಮಣ್ಯ - ಮಂಗಳೂರು ಸೆಂಟ್ರಲ್ ಹಾಗೂ ರೈಲು ನಂ. 06489 ಮಂಗಳೂರು ಸೆಂಟ್ರಲ್ - ಸುಬ್ರಹ್ಮಣ್ಯ ರೋಡ್ ಅನ್ ರಿಸರ್ವ್ಡ್ ಎಕ್ಸ್ ಪ್ರೆಸ್ ವಿಶೇಷ ರೈಲಿನ ಇಂದಿನ (ಜೂ.30) ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣ್ಣು ತೆರವು ಕಾರ್ಯ ಭರದಿಂದ ಸಾಗಿದ್ದು, ಸಂಜೆ 4:30ರ ಸುಮಾರಿಗೆ ಹಳಿಯು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News