​ನೆರೆ, ಪ್ರಾಕೃತಿಕ ವಿಕೋಪ ಪರಿಸ್ಥಿತಿ ಎದುರಿಸಲು ಉಡುಪಿ ಜಿಲ್ಲೆ ಸನ್ನದ್ಧ: ಡಿಸಿ ಕೂರ್ಮಾರಾವ್

Update: 2022-06-30 15:52 GMT

ಉಡುಪಿ : ಪ್ರವಾಹ, ಪ್ರಾಕೃತಿಕ ವಿಕೋಪದಂಥ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಉಡುಪಿ ಜಿಲ್ಲೆಯನ್ನು ಸನ್ನದ್ಧ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಪ್ರವಾಹ ಪರಿಸ್ಥಿತಿ ಎದುರಾದಾಗ ಕೈಗೊಳ್ಳ ಬೇಕಾದ ಸಿದ್ಧತೆಯ ಬಗ್ಗೆ ನಾನಿಂದು ಪರಿಶೀಲನೆ ನಡೆಸಿದ್ದು, ಎಲ್ಲರೂ ಎಲ್ಲಾ ರೀತಿಯ ಸಿದ್ದತೆಗಳೊಂದಿಗೆ ರೆಡಿಯಾಗಿದ್ದಾರೆ. ಬೋಟ್ ವ್ಯವಸ್ಥೆ, ಸಿಬ್ಬಂದಿಗಳು ಪರಿಸ್ಥಿತಿ ಎದುರಿಸಲು ಜಾಗೃತರಾಗಿರುವುದನ್ನು  ಪರಿಶೀಲಿಸಿ ದ್ದೇನೆ. ಎಲ್ಲರೂ ಪರಿಸ್ಥಿತಿ ಎದುರಿಸಲು ಜಾಗರೂಕರಾಗಿದ್ದಾರೆ.  ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ನೆರೆ ಕಾಣಿಸಿಕೊಳ್ಳುವ ತಗ್ಗು ಪ್ರದೇಶಗಳಿಗೂ ಭೇಟಿ ನೀಡಿದ್ದೇನೆ. ನಮ್ಮೆಲ್ಲಾ ಸಿಬ್ಬಂದಿ ಗಳೊಂದಿಗೆ ಮಾತನಾಡಿದ್ದೇನೆ. ಸಾರ್ವಜನಿಕರಿಗೂ ಇಂಥ ಪರಿಸ್ಥಿತಿ ಎದುರಿಸಲು ಬೇಕಾದ ತರಬೇತಿ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ, ನಗರಸಭೆ, ಜನಪ್ರತಿನಿಧಿಗಳು, ಸಾರ್ವಜನಿಕರು ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿ ಸಬೇಕು ಎಂದು ಮನವಿ ಮಾಡಿದ ಜಿಲ್ಲಾಧಿಕಾರಿ, ಇದಕ್ಕಾಗಿ ಇರುವ ಸಹಾಯ ವಾಣಿ ದಿನದ ೨೪ಗಂಟೆ ಕೆಲಸ ಮಾಡುತ್ತಿದೆ ಎಂದರು.

ಆಯಾ ಪ್ರದೇಶಗಳ ಪರಿಸ್ಥಿತಿಯನ್ನು ನೋಡಿ ಶಾಲೆಗೆ ರಜೆ ಕೊಡುವ ಬಗ್ಗೆ ಶಾಲಾ ಮುಖ್ಯಸ್ಥರಿಗೂ ಅಧಿಕಾರವನ್ನು ನೀಡಲಾಗಿದೆ ಎಂದೂ ಕೂರ್ಮಾರಾವ್ ಎಂ. ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News