​ಮಂಗಳೂರಿನಿಂದ ದೆಹಲಿಗೆ ನೇರ ವಿಮಾನಯಾನ

Update: 2022-07-01 12:56 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.1: ರಾಷ್ಟ್ರದ ರಾಜಧಾನಿಗೆ ನೇರ ವಿಮಾನಯಾನಕ್ಕಾಗಿ ಕರಾವಳಿ ನಗರದ ಬಹುಕಾಲದ ಬೇಡಿಕೆ ಈಡೇರುತ್ತಿದ್ದು, ಇಂಡಿಗೋ ಏರ್‌ವೇಸ್‌ನ ವಿಮಾನವು ಇಂದಿನಿಂದ ಮಂಗಳೂರು- ದೆಹಲಿ ನಡುವೆ ವಿಮಾನ ಯಾನ ಆರಂಭಿಸಿದೆ.

6E 2164 ವಿಮಾನದಲ್ಲಿ 77 ಪ್ರಯಾಣಿಕರು ದೆಹಲಿಯಿಂದ ಮಂಗಳೂರು ತಲುಪಿದ್ದರೆ, 6E 2165 ವಿಮಾನದಲ್ಲಿ 140 ಪ್ರಯಾಣಿಕರು ಮಂಗಳೂರಿನಿಂದ ದೆಹಲಿಗೆ ಪ್ರಯಾಣಿಸಿದರು. ಕ್ಯಾಪ್ಟನ್ ಅನುಭವ್ ಬ್ಯಾನರ್ಜಿ ಈ ಹಾರಾಟದ ನೇತೃತ್ವ ವಹಿಸಿದ್ದರು. 6E 2164 ಮತ್ತು 6E 2165 ವಿಮಾನಗಳು ರವಿವಾರ, ಸೋಮವಾರ, ಬುಧವಾರ ಮತ್ತು ಸಂಚರಿಸಲಿದೆ.

6E 2164 ವಿಮಾನ ದೆಹಲಿಯಿಂದ ಬೆಳಗ್ಗೆ 7.40ಕ್ಕೆ ಹೊರಟು ಬೆಳಗ್ಗೆ 10.45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇದೇ ವೇಳೆ 6E 2165 ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.45ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಲಿದೆ.

ಈ ನೇರ ವಿಮಾನ ಯಾನವು ಚಂಡೀಗಡ, ದೆಹ್ರಾದುನ್, ಪಾಟ್ನ, ರಾಂಚಿ, ಲಕ್ನೋ, ಬೋಪಾಲ್, ದಮ್ಮಾಮ್, ಜೆದ್ದಾ ಮತ್ತು ರಿಯಾದ್‌ನಂತಹ ಸ್ಥಳಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕವನ್ನು ಸುಗಮಗೊಳಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News