ಮಂಗಳೂರು | ಎಸ್.ವೈ.ಎಸ್.ನಿಂದ ವೈದ್ಯರ ದಿನಾಚರಣೆ

Update: 2022-07-02 11:38 GMT

ಮಂಗಳೂರು, ಜು.2: ಕರ್ನಾಟಕ ರಾಜ್ಯ ಸುನ್ನೀ ಯುವ ಜನ(ಎಸ್.ವೈ.ಎಸ್.) ಸಂಘದ ವತಿಯಿಂದ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ನಗರದ ಲೇಡಿಗೋಷನ್ ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ ಆಚರಿಸಲಾಯಿತು.

ಜಿಲ್ಲಾ ಸಮಿತಿ ನೇತೃತ್ವದಲ್ಲಿ ಎಸ್.ವೈ.ಎಸ್. ಮಂಗಳೂರು ಸೆಂಟರ್ ಮತ್ತು ಫರಂಗಿಪೇಟೆ ಸೆಂಟರ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಂದೇಶ ಭಾಷಣ ಮಾಡಿದರು.

ಲೇಡಿಗೋಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಬಲಕೃಷ್ಣ ರಾವ್, ಡಾ.ಸುಂದರಿ, ಡಾ.ಅರವಿಂದ, ಡಾ.ಲೇಖಾ, ಡಾ.ಅಸ್ಫಿಯ, ಡಾ.ಇಲಂಗೋವನ್, ಡಾ.ಮಧುರ ಭಾಗವಹಿಸಿದ್ದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಸದಾಶಿವ, ಡಾ.ಸುಧಾಕರ್, ಡಾ.ಅನಿತಾ ಕಿರಣ್, ಡಾ.ದಿನೇಶ್ ಕಾಮತ್, ಡಾ.ನವೀನ್ ಕುಮಾರ್ ವಿ., ಡಾ.ರಶ್ಮಿ ಡಿ.ಎಸ್., ಡಾ.ಸದಾನಂದ ಪೂಜಾರಿ, ಡಾ.ಆನಂದ ಪೈ, ಡಾ.ಅಂಬಿಕಾ, ಡಾ.ವೇಣುಗೋಪಾಲ, ಡಾ.ಶ್ರೀಂ ರಾಮ್ ಭಟ್, ಎಸ್.ವೈ.ಎಸ್. ದ.ಕ. ಜಿಲ್ಲೆ ವೆಸ್ಟ್ ಅಧ್ಯಕ್ಷ ನವಾಝ್ ಸಖಾಫಿ, ಹಾಜಿ ರಶೀದ್ ಪಾಂಡೇಶ್ವರ, ಎಸ್.ವೈ.ಎಸ್.  ಜಿಲ್ಲಾ ನಾಯಕರಾದ ಸಲಿಂ ಹಾಜಿ, ವಿ.ಎ.ಮುಹಮ್ಮದ್ ಸಖಾಫಿ, ಜಬ್ಬಾರ್ ಕಣ್ಣೂರು, ನಝೀರ್ ವಳವೂರು. ಎಸ್.ವೈ.ಎಸ್. ಮಂಗಳೂರು ಸೆಂಟರ್ ಅಧ್ಯಕ್ಷ ಕೆ.ಸಿ.ಎಣ್ಮೂರು, ಮಂಗಳೂರು ಸೆಂಟರ್ ಕಾರ್ಯದರ್ಶಿ ಹಸನ್ ಪಾಂಡೇಶ್ವರ ಉಪಸ್ಥಿತರಿದ್ದರು.

 ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮಾಲಿಕಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News