ರಶ್ಯ: ಮಿಲಿಟರಿ ಸೇವೆಗೆ ಸೇರುವುದರಿಂದ ತಪ್ಪಿಸಿಕೊಂಡ ಒಲಿಂಪಿಕ್ಸ್ ಪದಕ ವಿಜೇತ ಕ್ರೀಡಾಪಟು ಬಂಧನ

Update: 2022-07-03 16:31 GMT
Photo: Twitter/@igorsushko

ಮಾಸ್ಕೊ, ಜು.3: ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದರಿಂದ ತಪ್ಪಿಸಿಕೊಂಡು, ಅಮೆರಿಕ ಮೂಲದ ನ್ಯಾಷನಲ್ ಹಾಕಿ ಲೀಗ್ ತಂಡದ ಪರ ಆಡಲು ಕರಾರು ಮಾಡಿಕೊಂಡಿದ್ದ ರಶ್ಯದ ಐಸ್‌ಹಾಕಿ ಆಟಗಾರನನ್ನು ಬಂಧಿಸಲಾಗಿದೆ ಎಂದು ರಶ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಈ ವರ್ಷ ಬೀಜಿಂಗ್‌ನಲ್ಲಿ ನಡೆದಿದ್ದ ಚಳಿಗಾಲದ ಒಲಿಂಪಿಕ್ಸ್‌ನ ಐಸ್‌ಹಾಕಿ ಟೂರ್ನಿಯಲ್ಲಿ ಬೆಳ್ಳಿಪದಕ ಗೆದ್ದ ತಂಡದ ಸದಸ್ಯರಾಗಿದ್ದ ಇವಾನ್ ಫೆಡೊಟೊವ್‌ರನ್ನು  ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ತಪ್ಪಿಸಿಕೊಂಡ ಕಾರಣಕ್ಕೆ ಬಂಧಿಸಲಾಗಿದೆ. ಆದರೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇವಾನ್ ಹಾಕಿ ಲೀಗ್ ತಂಡವಾದ ಫಿಲಿಡೆಲ್ಫಿಯಾ ಫ್ಳೈಯರ್ಸ್ ಪರ ಆಡಲು ಮೇ ತಿಂಗಳಲ್ಲಿ ಸಹಿ ಹಾಕಿದ್ದರು. ಮಿಲಿಟರಿ ಪ್ರಾಸಿಕ್ಯೂಟರ್ ಕಚೇರಿಯ ಸೂಚನೆಯ ಮೇರೆಗೆ ಸೈಂಟ್ ಪೀಟರ್ಸ್‌ಬರ್ಗ್ ಪೊಲೀಸರು ಬಂಧಿಸಿ ಮಿಲಿಟರಿ ಸೇರ್ಪಡೆ ಕಚೇರಿಗೆ ಕರೆದೊಯ್ದರು. ಆದರೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News