ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್: ಜಸ್ಪ್ರೀತ್ ಬುಮ್ರಾ ಹೊಸ ದಾಖಲೆ

Update: 2022-07-04 05:18 GMT
Photo:twitter

ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಭಾರತದ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಬುಮ್ರಾ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ನ ಮೊದಲ  ಇನಿಂಗ್ಸ್  ನಲ್ಲಿ ಇಂಗ್ಲೆಂಡ್‌ನ ಎಲ್ಲಾ ಅಗ್ರ ಮೂವರು ಆಟಗಾರರು ಒಳಗೊಂಡಂತೆ 68 ರನ್ ಗೆ 3 ವಿಕೆಟ್ ಗಳನ್ನು ಕಬಳಿಸಿದ್ದಾರೆ.   ಕಳೆದ ವರ್ಷ ಆರಂಭವಾದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಭಿಯಾನದಲ್ಲಿ ಬುಮ್ರಾ ಒಟ್ಟು  21 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಈ ಸಾಧನೆ ಮೂಲಕ ಬುಮ್ರಾ ಅವರು  2014ರಲ್ಲಿ ಐದು ಪಂದ್ಯಗಳ ಸರಣಿಯಲ್ಲಿ ಒಟ್ಟು 19 ವಿಕೆಟ್‌ಗಳನ್ನು ಕಬಳಿಸಿದ್ದ ಭುವನೇಶ್ವರ ಕುಮಾರ್ ಅವರ ದಾಖಲೆಯನ್ನು ಮುರಿದರು.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ  ಭಾರತವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಬುಮ್ರಾಗೆ 5ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ ನಲ್ಲಿ ಇನ್ನಷ್ಟು ವಿಕೆಟ್ ಗಳಿಸುವ ಅವಕಾಶವಿದೆ.

ಇಂಗ್ಲೆಂಡ್‌ನಲ್ಲಿ ನಡೆದ  ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನುಪಡೆದ  ಭಾರತದ ಬೌಲರ್‌ಗಳು

ಆಟಗಾರ                        ವರ್ಷ     ಪಂದ್ಯಗಳು   ವಿಕೆಟ್‌ಗಳು

ಜಸ್ಪ್ರೀತ್ ಬುಮ್ರಾ          2021/22      5                21  

ಭುವನೇಶ್ವರ ಕುಮಾರ್   2014          5                 19

ಝಹೀರ್ ಖಾನ್            2007           3                 18

ಇಶಾಂತ್ ಶರ್ಮಾ          2018           5                  18     

ಸುಭಾಷ್ ಗುಪ್ತೆ              1959           5                 17

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News